ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿಗ್ರಾಮದಲ್ಲಿ ಭಾರೀ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ತಪೋವನ ಪ್ರದೇಶದಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ. ನದಿಯಲ್ಲಿ ಏಕಾಏಕಿ ಪ್ರವಾಹ ಹೆಚ್ಚಾಗಲು 2 ಬ್ರಿಡ್ಜ್ ಗಳು ಒಡೆದಿರುವುದೇ ಕಾರಣ ಎನ್ನಲಾಗಿದೆ. ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿ ಹೋಗಿದ್ದು, 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ರೈಣಿ ಗ್ರಾಮದಲ್ಲಿ ಭಾರೀ ಹಿಮಕುಸಿತ: ಕೊಚ್ಚಿ ಹೋದ ಮನೆಗಳು – ನಾಪತ್ತೆಯಾದ ಕಾರ್ಮಿಕರು
ದೌಲಿಗಂಗಾ, ಅಲಕನಂದಾ ನದಿ ಪಾತ್ರದ ಗ್ರಾಮಗಳು ಮುಳುಗುವ ಭೀತಿಯಲ್ಲಿದ್ದು, ಜಿಲ್ಲಾಡಳಿತ ಈ ಭಾಗದ ಗ್ರಾಮದ ಜನರನ್ನು ಸ್ಥಳಾಂತರ ಮಾಡಲು ಮುಂದಾಗಿದೆ. ಚಮೋಲಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ದೇವಾಲಗಳು ಜಲಾವೃತಗೊಂಡಿವೆ. ಇನ್ನು ಉತ್ತರಾಖಂಡ್ ನ 5 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹರಿದ್ವಾರ, ಋಷಿಕೇಶ್, ರುದ್ರಪ್ರಯಾಗ್, ಕರ್ಣಪ್ರಯಾಗ್, ಚಮೋಲಿ ಸೇರಿದಂತೆ 5 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.