alex Certify BIG NEWS: ಸ್ವಯಂ ಸೇವಕರಾಗಿ ಲಸಿಕೆ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೊನಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಯಂ ಸೇವಕರಾಗಿ ಲಸಿಕೆ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೊನಾ..!

ಕೊರೋನಾ ವೈರಸ್‌ಗೆ ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಟ್ರಯಲ್‌ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ಪ್ರಾರಂಭವಾಗಿದ್ದು ಗೊತ್ತೇ ಇದೆ. ಅಷ್ಟೆ ಯಾಕೆ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಮೊದಲ ಲಸಿಕೆ ಪಡೆದಿದ್ದರು. ಆದರೆ ಇದೀಗ ಲಸಿಕೆ ಪಡೆದ ನಂತರ ಈ ಸಚಿವರಿಗೆ ಸೋಂಕು ತಗುಲಿದೆ.

ಹೌದು, ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್ ನಡೆಯುತ್ತಿದೆ. ಸುಮಾರು 2600 ಜನರ ಮೇಲೆ ಈ ಲಸಿಕೆ ಪ್ರಯೋಗಿಸಲಾಗುವುದು ಎಂದು ಸಂಸ್ಥೆ ತಿಳಿಸಿತ್ತು. ಅದರಂತೆ ಈಗಾಗಲೇ ಹಲವಾರು ಜನರಿಗೆ ಲಸಿಕೆ ನೀಡಲಾಗಿದೆ. ಆದರೆ ಇದೀಗ ಈ ಸಚಿವರಿಗೆ ಸೋಂಕು ತಗುಲಿದೆ.

ಇನ್ನು ಈ ಕುರಿತು ಟ್ವಿಟ್ ಮಾಡಿರುವ ಹರ್ಯಾಣ ಸಚಿವ ಅನಿಲ್ ವಿಜ್, ನನಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಪಡಿ ಹಾಗೂ ಕ್ವಾರಂಟೀನ್ ಆಗಿ ಎಂದು ಹೇಳಿದ್ದಾರೆ. ಭಾರೀ ಭರವಸೆ ಮೂಡಿಸಿತ್ತು ಕೋವ್ಯಾಕ್ಸಿನ್ ಲಸಿಕೆ. ಆದರೆ ಇದೀಗ ಲಸಿಕೆ ಪಡೆದ ನಂತರ ಸ್ವತಃ ಸಚಿವರಿಗೆ ಕೊರೊನಾ ಬಂದಿರೋದು ಅನೇಕ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...