ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಓಡಾಟ ಶುರುವಾಗಲಿದೆ. ಸೆಪ್ಟೆಂಬರ್ 10 ರಿಂದ ಇವುಗಳ ಬುಕಿಂಗ್ ನಡೆಯಲಿದೆ. ಈಗಾಗಲೇ ಓಡಾಟ ಶುರು ಮಾಡಿರುವ 230 ರೈಲುಗಳ ಜೊತೆಗೆ ಈ ರೈಲುಗಳು ಓಡಾಟ ಶುರು ಮಾಡಲಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ದೇಶದಲ್ಲಿ 230 ವಿಶೇಷ ರೈಲುಗಳು ಮಾತ್ರ ಓಡಾಡುತ್ತಿವೆ. ಕೊರೊನಾ ಹಿನ್ನಲೆಯಲ್ಲಿ ಕೆಲವೊಂದು ಕಟ್ಟುನಿಟ್ಟು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
ನಿಲ್ದಾಣ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ. ಹಾಗಾಗಿ ಎಲ್ಲಾ ಪ್ರಯಾಣಿಕರು ಕನಿಷ್ಠ 90 ನಿಮಿಷಗಳ ಮುಂಚಿತವಾಗಿ ನಿಲ್ದಾಣಕ್ಕೆ ಬರಬೇಕು. ಕೊರೊನಾ ಲಕ್ಷಣ ಕಂಡು ಬಂದಲ್ಲಿ ರೈಲ್ವೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಸಾಮಾಜಿಕ ಅಂತರ ಕೂಡ ಕಡ್ಡಾಯವಾಗಿದೆ.
ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಇಟ್ಟುಕೊಂಡಿರಬೇಕು. ಕೊರೊನಾ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ದಿಂಬು, ಬೆಡ್ ಶೀಟ್ ಸೇರಿದಂತೆ ಯಾವುದೇ ವಸ್ತುಗಳನ್ನು ನೀಡುತ್ತಿಲ್ಲ. ಕೊರೊನಾ ನಂತ್ರವೂ ಎಸಿ ಕೋಚ್ ಗೆ ದಿಂಬು, ಬೆಡ್ ಶೀಟ್ ನೀಡುವುದಿಲ್ಲವೆಂದು ರೈಲ್ವೆ ಇಲಾಖೆ ಹೇಳಿದೆ.