ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ವೈದ್ಯಕೀಯ ಲೋಕವೇ ನಲುಗಿ ಹೋಗಿದ್ದು, ದೇಶದಲ್ಲಿ ಈವರೆಗೆ 513 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!
ಈ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಪಷ್ಟಪಡಿಸಿದ್ದು, ದೇಶಾದ್ಯಂತ ಕೊರೊನಾ ಎರಡನೇ ಅಲೆಗೆ ತುತ್ತಾದ ವೈದ್ಯರ ಬಗ್ಗೆ ಮಾಹಿತಿ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲಿಯೇ 103 ವೈದ್ಯರು ಕೊರೊನಾಗೆ ಬಲಿಯಾಗಿದ್ದಾರೆ.
‘ಯಾಸ್’ ಚಂಡಮಾರುತ ಪ್ರಭಾವ, ಮೇ 29 ರ ವರೆಗೆ ಮಳೆ ಸಾಧ್ಯತೆ
ಬಿಹಾರದಲ್ಲಿ 96, ರಾಜಸ್ಥಾನದಲ್ಲಿ 39 ಹಾಗೂ ಕರ್ನಾಟಕದಲ್ಲಿ 8 ವೈದ್ಯರು ಮಹಾಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.