ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ವಿಷಯ ಆಚೆ ಬಂದಿದೆ.
ನಗರದ ಖಾಂಡಿವಲಿ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ತನ್ನ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಸಿಕಲ್ ಕಾಣೆಯಾಗಿದ್ದನ್ನು ಕಂಡ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆ ಪ್ರದೇಶದ ಸಿಸಿ ಟಿವಿ ಫುಟೇಜ್‌ಗಳನ್ನು ಪರಿಶೀಲಿಸಿ ಕಳ್ಳನನ್ನು ಕಂಡುಹಿಡಿದಿದ್ದಾರೆ.
ಈ ಕಾರಣಕ್ಕೆ ʼರೆಮಿಡಿಸಿವರ್ʼ ಉತ್ಪಾದನೆ ದ್ವಿಗುಣಗೊಳಿಸಿದ ಸಿಪ್ಲಾ
ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ಟೇನೇಜರ್ ಕಳ್ಳ ಡ್ರಗ್ ವ್ಯಸನಿಯಾಗಿದ್ದು, ತನ್ನ ದುಶ್ಚಟ ಮುಂದುವರೆಸಲು ದುಡ್ಡು ಗಳಿಸಲು ಹೀಗೆ ಮಾಡುತ್ತಿದ್ದ. ಈತ ಕದ್ದಿರುವ ಬೈಸಿಕಲ್‌ಗಳ ಒಟ್ಟಾರೆ ಮೌಲ್ಯವು ನಾಲ್ಕು ಲಕ್ಷ ರೂ. ಗಳಷ್ಟಿದೆ. ಕದ್ದ ಬೈಸಿಕಲ್‌ಗಳನ್ನು ಮಾರುವಾಗ, ತನ್ನ ಹೆತ್ತವರು ಅನಾರೋಗ್ಯಕ್ಕೆ ಈಡಾಗಿದ್ದು, ಚಿಕಿತ್ಸೆಗಾಗಿ ತುರ್ತು ಹಣ ಬೇಕಾದ ಕಾರಣ ಹೀಗೆ ಮಾಡುತ್ತಿರುವುದಾಗಿ ಜನರನ್ನು ನಂಬಿಸುತ್ತಿದ್ದ.
ಕಳೆದ ವರ್ಷದ ಜುಲೈನಲ್ಲಿ ಪಂಜಾಬ್‌ನ ಕರಾರ್‌ನ 17 ವರ್ಷದ ಹುಡುಗನೊಬ್ಬ ಪಬ್‌ಜಿ ಆಟದ ಗೀಳು ಹತ್ತಿಸಿಕೊಂಡು, ಅದಕ್ಕೆ ಬೇಕಾದ ಆನ್ಲೈನ್ ಅಮ್ಯೂನಿಷನ್ ಖರೀದಿ ಮಾಡಲೆಂದು 16 ಲಕ್ಷ ರೂ.ಗಳನ್ನು ವ್ಯಯಿಸಿದ್ದ. ಆನ್ಲೈನ್ ಕ್ಲಾಸ್‌ಗಳಿಗೆ ಹಾಜರಾಗಬೇಕೆಂದು ಹೇಳಿ ಅಪ್ಪನಿಂದ ಫೋನ್ ಪಡೆಯುತ್ತಿದ್ದ ಈ ಹುಡುಗ ಇನ್-ಅಪ್ಲಿಕೇಶನ್ ಖರೀದಿ ಮೂಲಕ ತಾನು ಹಾಗೂ ತನ್ನ ಸ್ನೇಹಿತರಿಗೆ ಈ ಫೀಚರ್‌ಗಳನ್ನು ಖರೀದಿ ಮಾಡಲು ತಂದೆಯ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡಿದ್ದ.