alex Certify ಈ ಕಾರಣಕ್ಕೆ ʼರೆಮಿಡಿಸಿವರ್ʼ​ ಉತ್ಪಾದನೆ ದ್ವಿಗುಣಗೊಳಿಸಿದ ಸಿಪ್ಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ʼರೆಮಿಡಿಸಿವರ್ʼ​ ಉತ್ಪಾದನೆ ದ್ವಿಗುಣಗೊಳಿಸಿದ ಸಿಪ್ಲಾ

ಭಾರತದ ಸಿಪ್ಲಾ ಔಷಧಿ ತಯಾರಕ ಕಂಪನಿ ಕೊರೊನಾ ಲಸಿಕೆ ರೆಮಿಡಿಸಿವರ್​ನ ತಯಾರಿಕೆಯನ್ನ ದ್ವಿಗುಣಗೊಳಿಸಿದೆ. ಕೊರೊನಾ ಎರಡನೇ ಅಲೆಯಿಂದಾಗಿ ದೇಶ ತತ್ತರಿಸಿದ್ದು ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನ ಕೈಗೊಂಡಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್​ನ್ನು ಹಿಂದಿಕ್ಕಿರುವ ಭಾರತ, ಅಮೆರಿಕವನ್ನ ಹೊರತುಪಡಿಸಿದ್ರೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನ ಹೊಂದಿದೆ. ಒಟ್ಟು 1.4 ಬಿಲಿಯನ್​ ಜನಸಂಖ್ಯೆಯಲ್ಲಿ ಈವರೆಗೆ 107 ಮಿಲಿಯನ್​ ಮಂದಿ ಲಸಿಕೆಯನ್ನ ಸ್ವೀಕರಿಸಿದ್ದಾರೆ.

ದೇಶದಲ್ಲಿ ಲಸಿಕೆ ಅಭಾವ ಕಂಡು ಬರ್ತಿರುವ ಹಿನ್ನೆಲೆಯಲ್ಲಿ ರೆಮಿಡಿಸಿವರ್​ ಹಾಗೂ ಅದಕ್ಕೆ ಬೇಕಾದ ಔಷಧೀಯ ಪದಾರ್ಥಗಳನ್ನ ರಫ್ತು ಮಾಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ದೇಶದಲ್ಲಿ ಕೊರೊನಾ ಭೀತಿ ಹೆಚ್ಚಾಗಿರೋದ್ರಿಂದ ನಾವು ರೆಮಿಡಿಸಿವರ್​ ಉತ್ಪಾದನೆಯನ್ನ ದ್ವಿಗುಣಗೊಳಿಸಿದ್ದೇವೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಲಸಿಕೆ ಬೇಡಿಕೆಯನ್ನ ಗಮನದಲ್ಲಿ ಇಟ್ಟುಕೊಂಡು ನಾವು ಉತ್ಫಾದನೆ ಮಾಡುತ್ತಿದ್ದೇವೆ ಎಂದು ಸಿಪ್ಲಾ ಹೇಳಿಕೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...