
ನಾನು ಭುವನೇಶ್ವರ ಎಂಬಿಎಸ್ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಯಾಗಿದ್ದೇನೆ. ನಾನು ಪ್ರತಿದಿನ ಶಾಲೆಗೆ ತೆರಳಲು ಮೊ ಬಸ್ ಬಳಕೆ ಮಾಡುತ್ತಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ನ ವೇಳಾಪಟ್ಟಿ ಬದಲಾಗಿದೆ ಎಂದು ಟ್ವೀಟ್ ಮಾಡಿದ್ದ.
ನನ್ನ ಶಾಲೆಗೆ ನಾನು 7.30 ರ ಒಳಗಾಗಿ ಹಾಜರಾತಿ ನೀಡಬೇಕು. ಆದರೆ ದುರದೃಷ್ಟವಶಾತ್ ಮಾರ್ಗ್ 13ರ ಮೊದಲ ಬಸ್ ಲಿಂಗೀಪುರದಿಂದ ಬೆಳಗ್ಗೆ 7:40 ಕ್ಕೆ ಹೊರಡುತ್ತಿದೆ. ಇದರ ಪರಿಣಾಮವಾಗಿ ನಾನು ಶಾಲೆಗೆ ತಡವಾಗಿ ತಲುಪುತ್ತಿದ್ದು ಸಂಕಷ್ಟ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ. ವಿದ್ಯಾರ್ಥಿಯ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್ಪೋರ್ಟ್, ಸಾಯಿ, ನಿಮ್ಮ ವಿನಂತಿಯನ್ನ ನಾವು ಗಮನಿಸಿದ್ದೇವೆ ಎಂದು ಟ್ವೀಟ್ ಮಾಡಿತ್ತು.
ಇತ್ತ ಸಿಆರ್ಯುಟಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಕೂಡ ಟ್ವೀಟ್ ಮಾಡಿ, ಬಸ್ ಸಮಯವನ್ನ ಬದಲಾಯಿಸಲಾಗುವುದು. ಹಾಗೂ ಇದರಿಂದ ನಿಮಗೆ ಶಾಲೆಗೆ ಹೋಗೋಕೆ ತಡವಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

.