ಭುವನೇಶ್ವರ: ಲಾಕ್ ಡೌನ್ ಅವಧಿಯಲ್ಲಿ ರಾಮಾಯಣ ಸೇರಿ ಹಲವು ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲಾಯಿತು. ಎಲ್ಲರೂ ಅದನ್ನು ನೋಡಿ ಸುಮ್ಮನಾದರು. ಆದರೆ, ಒಡಿಶಾದ ಬಾಲಕನೊಬ್ಬ ಅದನ್ನೇ ಪುಸ್ತಕ ಬರೆದಿದ್ದಾನೆ.
ಆಯುಷ್ ಕುಮಾರ್ ಕುಂತಿಯಾ ಎಂಬ ಬಾಲಕ ಒಡಿಯಾ ಭಾಷೆಯಲ್ಲಿ 104 ಪುಟಗಳ ರಾಮಾಯಣ ಕಥೆ ಬರೆದಿದ್ದಾನೆ. ಅದಕ್ಕೆ ಪಿಲಕಾ ರಾಮಾಯಣ (ಮಕ್ಕಳ ರಾಮಾಯಣ) ಎಂದು ಹೆಸರಿಟ್ಟಿದ್ದಾನೆ.
ವಿಡಿಯೋ ವೀಕ್ಷಿಸಿದಾಗ ‘ಅಸಲಿ’ ಅಭ್ಯರ್ಥಿ ಬಣ್ಣ ಬಯಲು
“ಧಾರಾವಾಹಿಯನ್ನು ಕೇವಲ ನೋಡುವುದಲ್ಲ. ಅದರ ಪ್ರಮುಖ ಅಂಶಗಳನ್ನು ಬರೆಯಬೇಕು ಎಂದು ನನ್ನ ಚಿಕ್ಕಪ್ಪ ಹೇಳಿದರು. ನಾನು ಪ್ರತಿ ಎಪಿಸೋಡ್ ಗಳನ್ನು ನೋಡಿ ನೋಟ್ ಮಾಡಿಕೊಳ್ಳುತ್ತಿದ್ದೆ. ಪುಸ್ತಕ ಮುಗಿಸಲು 3 ತಿಂಗಳು ಬೇಕಾಯಿತು” ಎನ್ನುತ್ತಾನೆ ಬಾಲಕ.