ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ದೊಡ್ಡ ದೊಡ್ಡ ಆಸ್ತಿದಾರರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲು ಭೋಪಾಲ್ನ ಮುನ್ಸಿಪಲ್ ಕಾರ್ಪೋರೇಷನ್ ವಿನೂತನ ಅಭಿಯಾನವೊಂದನ್ನ ನಡೆಸೋಕೆ ಮುಂದಾಗಿದೆ.
ಈ ಕ್ಯಾಂಪೇನ್ನ ಅಡಿಯಲ್ಲಿ ಪೌರ ಕಾರ್ಮಿಕರು ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರ ಮನೆಯ ಎದುರು ಡಂಗೂರ ಸಾರಲಿದ್ದಾರೆ.
ನಗರಸಭೆಯು ಕಾಲ ಕಾಲಕ್ಕೆ ತೆರಿಗೆ ಸಂಗ್ರಹಕ್ಕಾಗಿ ಅಭಿಯಾನಗಳನ್ನ ನಡೆಸುತ್ತಿತ್ತು. ಆದರೆ ಈ ಯಾವುದೇ ಅಭಿಯಾನಕ್ಕೆ ಸಾರ್ವಜನಿಕರು ಸರಿಯಾದ ಬೆಲೆ ನೀಡದ ಕಾರಣ, ಈ ಬಾರಿ ಈ ಹೊಸ ಅಭಿಯಾನವನ್ನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ರೀತಿ ಮನೆ ಮುಂದೆ ಡಂಗೂರ ಸಾರಿದರೆ ಸಾಮಾಜಿಕವಾಗಿ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಭಯಕ್ಕಾದರೂ ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಬಹುದು ಎಂಬ ನಿರೀಕ್ಷೆಯಿಂದ ಈ ಅಭಿಯಾನವನ್ನ ಮಾಡಲಾಗ್ತಿದೆ.