ಸೈಬರ್ ಕ್ರಿಮಿನಲ್ಗಳು ಇದೀಗ ಜನರನ್ನ ವಂಚಿಸೋಕೆ ಕೊರೊನಾ ಲಸಿಕೆಯನ್ನ ಬಂಡವಾಳವಾಗಿ ಉಪಯೋಗಿಸಿಕೊಳ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆ ನೆಪವೊಡ್ಡಿ ಸೈಬರ್ ಕ್ರಿಮಿನಲ್ಗಳು ಕಾಲ್ ಮಾಡಿದ್ದಾರೆಂದು ಆರೋಪಿಸಿದ ಭೂಪಾಲ್ ಸೈಬರ್ ಸೆಲ್ನಲ್ಲಿ ಡಜನ್ಗೂ ಹೆಚ್ಚು ದೂರುಗಳು ದಾಖಲಾಗಿವೆ.
ಟಾರ್ಗೆಟ್ ಮಾಡಿದ ನಂಬರ್ಗೆ ಕಾಲ್ ಮಾಡುವ ಸೈಬರ್ ಕ್ರಿಮಿಗಳು ಕೊರೊನಾ ಲಸಿಕೆಗೆ ನೋಂದಾವಣಿ ಮಾಡುವಂತೆ ಹೇಳುತ್ತಾರೆ. ಬಳಿಕ ಬ್ಯಾಂಕ್ ಡಿಟೇಲ್ಸ್ ಪಡೆದು ಹಣವನ್ನ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಎಎಸ್ಪಿ ರಜತ್ ಸಾಕ್ಲೆಚಾ ಹೇಳಿದ್ದಾರೆ. ಅದೃಷ್ಟವಶಾತ್ ದೂರು ದಾಖಲಿಸಿದ ಯಾವೊಬ್ಬ ವ್ಯಕ್ತಿಯೂ ಇದುವರೆಗೆ ಹಣವನ್ನ ಕಳೆದುಕೊಂಡಿಲ್ಲ ಎಂದು ಅಧಿಕಾರಿ ಹೇಳಿದರು.
ಈ ಸಂಬಂಧ ಅಲರ್ಟ್ ಆಗಿರುವ ಭೂಪಾಲ್ ಪೊಲೀಸರು ಈ ರೀತಿಯ ಯಾವುದೇ ಕರೆಯನ್ನ ನಂಬದಂತೆ ಹಾಗೂ ಈ ರೀತಿ ಕರೆ ಮಾಡಿದ ವ್ಯಕ್ತಿ ನೀಡಿದ ಯಾವುದೇ ಲಿಂಕ್ಗಳನ್ನ ಓಪನ್ ಮಾಡಬೇಡಿ ಎಂದು ಜನತೆಯನ್ನ ಮನವಿ ಮಾಡಿದ್ದಾರೆ.