
ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪತಿ ತನ್ನ ಪತ್ನಿಯ ಜಿರಳೆ ಭಯಕ್ಕೆ ಸ್ಪಂದಿಸಿ ಆಕೆಯ ಕೋರಿಕೆಯಂತೆ 18 ಬಾರಿ ಮನೆ ಬದಲಾಯಿಸಿದ್ದಾನೆ. ಆದರೆ ಈಗ ಸತತ ಮುಜುಗರಕ್ಕೊಳಗಾಗಿ ಆಕೆಗೆ ವಿಚ್ಛೇದನ ನೀಡಲು ಸಹ ಯೋಚಿಸಿದ್ದಾನಂತೆ
2017ರಲ್ಲಿ ವಿವಾಹವಾದ ಕೂಡಲೇ ಗಂಡನಿಗೆ ಹೆಂಡತಿಯ ಜಿರಳೆ ಫೋಬಿಯಾ ಬಗ್ಗೆ ಅರಿವಾಯಿತು. ಒಂದು ದಿನ ಹೆಂಡತಿ ಅಡುಗೆ ಮನೆಯಲ್ಲಿ ಜಿರಳೆ ನೋಡಿದ ಬಳಿಕ ಕಿರುಚಿದ್ದಾಳೆ, ನಂತರ ಅವಳು ಅಡುಗೆ ಮನೆಗೆ ಪ್ರವೇಶಿಸಲು ನಿರಾಕರಿಸಿದಳು. ಮತ್ತು ಹೊಸ ಮನೆಗೆ ಸ್ಥಳಾಂತರಗೊಳ್ಳಬೇಕೆಂದು ಪಟ್ಟುಹಿಡಿದಳು.
ಲಗ್ನ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಫೋಟೋ ಹಾಕಿಸಿದ ವರ….!
ಆ ದಂಪತಿ 2018 ರಲ್ಲಿ ಮೊದಲ ಬಾರಿಗೆ ತಮ್ಮ ಮನೆಯನ್ನು ಬದಲಾಯಿಸಿಕೊಂಡರು, ಅಂದಿನಿಂದ, ದಂಪತಿಗಳು 18 ಮನೆ ಬದಲಾಯಿಸಿದ್ದಾರೆ, ಬದಲಾವಣೆಗೆ ಜಿರಳೆ ಕಾರಣವಂತೆ.
ಆ ಪತಿ ತನ್ನ ಹೆಂಡತಿಯನ್ನು ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧರಿಸಿದ್ದ. ಅದರೆ ಔಷಧಿಯನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದಳು. ಅಷ್ಟೇ ಅಲ್ಲದೆ ತನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಘೋಷಿಸಲು ಪತಿ ಮುಂದಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳಂತೆ.
ತನ್ನ ಹೆಂಡತಿ ಜಿರಳೆ ನೋಡಿದಾಗ ಜೋರಾಗಿ ಕಿರುಚುತ್ತಾ ಮನೆಯ ವಸ್ತುಗಳನ್ನು ರಸ್ತೆಗೆ ಹಾಕಲು ಪ್ರಾರಂಭಿಸುತ್ತಾಳೆ, ನನಗೂ ಸಾಕಾಗಿದೆ. ಕಾನೂನು ನೆರವು ಪಡೆಯಲು ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ.