ಸುಶ್ರಾವ್ಯ ʼಕಾಲರ್ ಟ್ಯೂನ್ʼ ಹುಡುಕುವವರಿಗೆ ಇಲ್ಲಿದೆ ಟಿಪ್ಸ್ 20-03-2021 8:32PM IST / No Comments / Posted In: Latest News, India ಯುವರಾಜ್ ಪಟೇಲ್ ಎಂಬ ಹೆಸರಿನ ಕಲಾವಿದರೊಬ್ಬರು 1965ರಲ್ಲಿ ತೆರೆಕಂಡ ʼವಕ್ತ್ʼ ಸಿನಿಮಾದ ಆಯೆ ಮೇರಿ ಜೋಹರಾಜಬೀನ್ ಎಂಬ ಹಾಡನ್ನ ಶಿಳ್ಳೆ ಹೊಡೆಯುವ ಮೂಲಕ ಹಾಡಿದ್ದು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ಜನರಲ್ ದಯಾನಂದ ಕಾಂಬ್ಳೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಯುವರಾಜ್ ಪಟೇಲ್ ಶಿಳ್ಳೆ ಹೊಡೆಯುತ್ತಲೇ ಹಾಡನ್ನ ಅನಾಯಾಸವಾಗಿ ಹೇಳಿದ್ದಾರೆ. 1 ನಿಮಿಷದ ವಿಡಿಯೋ ತಯಾರಿಸಿ ಪ್ರತಿ ತಿಂಗಳು ಗಳಿಸಿ 20 ಸಾವಿರ ರೂ. ಶಿಳ್ಳೆ ಮೂಲಕ ಹಾಡನ್ನ ಆರಂಭಿಸುವ ಮುನ್ನ ಯುವರಾಜ್, ನಮಸ್ಕಾರ ಗೆಳೆಯರೇ, ನಾನು ಯುವರಾಜ ಪಟೇಲ್, ಮಹಾರಾಷ್ಟ್ರದ ಔರಂಗಾಬಾದ್ನ ನಿವಾಸಿಯಾಗಿದ್ದೇನೆ. ಒಂದು ಸುಂದರ ಹಿಂದಿ ಗೀತೆಯನ್ನ ನಿಮ್ಮ ಮುಂದೆ ಶಿಳ್ಳೆಯ ಮೂಲಕ ಪ್ರಸ್ತುತಪಡಿಸಲಿದ್ದೇನೆ. ನಿಮಗೆ ಇದು ಇಷ್ಟವಾದಲ್ಲಿ ದಯವಿಟ್ಟು ಪ್ರೋತ್ಸಾಹ ನೀಡಿ. ಯಾಕೆಂದರೆ ನಿಮ್ಮ ಪ್ರೀತಿ ಹಾಗೂ ಆಶಿರ್ವಾದದಿಂದ ನನ್ನ ಉತ್ಸಾಹ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. Artist #YuvrajPatel from #Aurangabad has sung " ऐ मेरी जोहराजंबी तुझे मालूम नही " song on a whistle. pic.twitter.com/SYL0SiaXGg — Dayanand Kamble (@dayakamPR) March 16, 2021