ಈಗಾಗಲೇ ದೇಶದ 14 ರಾಜ್ಯಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿದೆ. ಒಂದು ಕಡೆ ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ನಡೆಸಲಾಗ್ತಾ ಇದ್ದರೆ ಇನ್ನೊಂದು ಕಡೆಯಲ್ಲಿ ಚಿಕನ್ ಹಾಗೂ ಮೊಟ್ಟೆ ಸೇವನೆಯನ್ನ ಬ್ಯಾನ್ ಮಾಡಲಾಗ್ತಿದೆ.
ಹಕ್ಕಿ ಜ್ವರದ ಕಾರಣದಿಂದಾಗಿ ಮೀನು ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿಕನ್ ಹಾಗೂ ಮೊಟ್ಟೆಯ ಜಾಗದಲ್ಲಿ ಜನರು ಮಟನ್ ಹಾಗೂ ಮೀನನ್ನ ಬಳಕೆ ಮಾಡ್ತಿದ್ದಾರೆ. ಮಟನ್ ಹಾಗೂ ಮೀನನ್ನ ಸೇವಿಸಿದ್ರೆ ಆರೋಗ್ಯಕ್ಕೆ ಏನೂ ಆಗಲ್ಲ ಅನ್ನೋ ನಂಬಿಕೆಯಲ್ಲಿ ಜನರಿದ್ದಾರೆ.
ಆದರೆ 241 ಫಿಶ್ ಫಾರ್ಮ್ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. 10 ರಾಜ್ಯಗಳ 241 ಫಿಶ್ ಫಾರ್ಮ್ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಮೀನುಗಳ ದೇಹದಲ್ಲಿ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದೆ.
ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಫಿಶ್ ಫಾರ್ಮ್ಗಳ ನೀರಿನಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಮಲಿನಕಾರಿ ಅಂಶ ಕಂಡು ಬಂದಿದೆ. ಈ ಭಾಗಗಳಲ್ಲಿ ಮೀನುಗಳಲ್ಲಿ ಸೀಸದ ಅಂಶ ಹೆಚ್ಚಾಗಿ ಕಂಡು ಬಂದಿದೆ. ಬಿಹಾರ ಹಾಗೂ ಒಡಿಶಾಗಳಲ್ಲೂ ಮೀನಿನಲ್ಲಿ ಮಾನವನ ದೇಹಕ್ಕೆ ಅತ್ಯಂತ ಭಯಾನಕ ಎನ್ನಲಾದ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದೆ.