alex Certify ಮದ್ಯ ಪ್ರಿಯರೇ ಆಸೆ ಬಿಟ್ಟುಬಿಡಿ, ಇನ್ನು 15 ದಿನ ಮದ್ಯ ಮಾರಾಟಕ್ಕೆ ಅವಕಾಶವನ್ನೇ ನೀಡದ ಕೇಂದ್ರ ʼಸರ್ಕಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರೇ ಆಸೆ ಬಿಟ್ಟುಬಿಡಿ, ಇನ್ನು 15 ದಿನ ಮದ್ಯ ಮಾರಾಟಕ್ಕೆ ಅವಕಾಶವನ್ನೇ ನೀಡದ ಕೇಂದ್ರ ʼಸರ್ಕಾರʼ

ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮದ್ಯದಂಗಡಿಗಳು ಬಂದ್ ಆಗಿದ್ದು ಮದ್ಯ ಪ್ರಿಯರು ಯಾವಾಗ ವೈನ್ ಶಾಪ್ ಓಪನ್ ಆಗುತ್ತವೆ ಎನ್ನುವುದನ್ನೇ ಕಾಯತೊಡಗಿದ್ದಾರೆ.

ಆದರೆ, ಮೇ 17 ರ ವರೆಗೂ ಲಾಕ್ ಡೌನ್ ಮುಂದುವರೆದಿರುವುದರಿಂದ ಮದ್ಯ ಪ್ರಿಯರು ಅಲ್ಲಿಯವರೆಗೂ ಕಾಯಬೇಕಿದೆ. ಲಾಕ್ಡೌನ್ ಮುಂದುವರಿಕೆ ಹಿನ್ನಲೆಯಲ್ಲಿ ಯಾವುದೇ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿಲ್ಲ.

ಹೊಸ ಮಾರ್ಗಸೂಚಿಯಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲದಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ. ಅಗತ್ಯ ವಸ್ತುಗಳ ಮತ್ತು ಸೇವೆಗಳ ಹೊರತುಪಡಿಸಿ ಗ್ರೀನ್ ಜೋನ್ ಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ. ಉಳಿದಂತೆ ರೆಡ್ ಜೋನ್ ಗಳಲ್ಲಿ ಲಾಕ್ಡೌನ್ ನಿರ್ಬಂಧ ಮುಂದುವರೆಯಲಿದೆ. ಮದ್ಯ ಮಾರಾಟಕ್ಕೆ ಮಾತ್ರ ಯಾವ ಜೋನ್ ಗಳಲ್ಲಿಯೂ ಅವಕಾಶವೇ ಇಲ್ಲವೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...