alex Certify ಅಪಘಾತಕ್ಕೂ ಮುನ್ನ ಫೇಸ್‌‌ ಬುಕ್ ‌ನಲ್ಲಿ ಪ್ರಯಾಣಿಕನ ಕೊನೆ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತಕ್ಕೂ ಮುನ್ನ ಫೇಸ್‌‌ ಬುಕ್ ‌ನಲ್ಲಿ ಪ್ರಯಾಣಿಕನ ಕೊನೆ ಪೋಸ್ಟ್

ದುಬೈ‌-ಕೋಯಿಕ್ಕೋಡ್‌ ನಡವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್‌ಗಳಲ್ಲದೇ 18 ಪ್ರಯಾಣಿಕರು ಮೃತಪಟ್ಟಿದ್ದಾರೆ.

’ವಂದೇ ಭಾರತ್‌ ಮಿಶನ್‌’ನ ವಿಶೇಷ ಫ್ಲೈಟ್‌ನಲ್ಲಿ ತವರಿಗೆ ಆಗಮಿಸುತ್ತಿದ್ದ ಇಲ್ಲಿನ ಕೋಯಿಕ್ಕೋಡ್‌ನ ಕುನ್ನಮಂಗಲಂನ ಶರಫು ಪಿಲಸ್ಸೆರಿ, ತಮ್ಮ ಮಡದಿ ಅಮೀನಾ ಶೆರಿನ್ ಹಾಗೂ ಮಗಳು ಇಸಾ ಫಾತಿಮಾ ಜೊತೆಗೆ ನತದೃಷ್ಟ IX-1344 ವಿಮಾನವೇರಿದ ಕೂಡಲೇ ಸೆಲ್ಫಿಯೊಂದನ್ನು ತೆಗೆದುಕೊಂಡು ಫೇಸ್ಬುಕ್‌ನಲ್ಲಿ ಹಾಕಿಕೊಂಡಿದ್ದರು.

ದುಬೈ‌ನಲ್ಲಿ ವಿಮಾನವೇರಿದ ಕೂಡಲೇ, PPE ಕಿಟ್‌ ಹಾಗೂ ಫೇಸ್‌ ಶೀಲ್ಡ್‌ನಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಫೋಟೋ ತೆಗೆದುಕೊಂಡು, “Back to Home” ಎಂದು ಪೋಸ್ಟ್ ಹಾಕಿಕೊಂಡಿದ್ದು, ತಮ್ಮ ತವರಿಗೆ ಮರಳಲು ಬಹಳ ಸಂತಸ ವ್ಯಕ್ತಪಡಿಸಿದ್ದರು.  ಈ ಅಪಘಾತದಲ್ಲಿ ಶರಫು ಪಿಲಸ್ಸೆರಿ ಸಾವನ್ನಪ್ಪಿದರೆ ಪತ್ನಿ ಮತ್ತು ಮಗಳು ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾರೆ.

എന്റെ കൂട്ടുകാരൻ ഷറഫു ഇന്നത്തെ ഫ്ലൈറ്റ് അപകടത്തിൽ മരണപ്പെട്ട വാർത്ത വളരെ വേദനയോടെയാണ് കേട്ടത്.. ??നാട്ടിലേക്ക്…

Posted by Shafi Parakkulam on Friday, August 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...