ಬಲೆಯೊಂದರಲ್ಲಿ ಸಿಲುಕಿದ್ದ ಲಂಗೂರ್ ಮಂಗವೊಂದರ ಮರಿಯನ್ನು ರೈತರು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಬಲೆಯನ್ನು ನಾಜೂಕಾಗಿ ಕಡಿದು, ಮರಿಯನ್ನು ಬಹಳ ಜತನದಿಂದ ಹೊರ ತೆಗೆಯಲು ರೈತರು ಮುಂದಾದ ವೇಳೆ ಆ ಮರಿಯ ತಾಯಿ ಹಾಗೂ ಬಳಗದ ಸದಸ್ಯರು ಅಷ್ಟು ದೂರದಲ್ಲಿ ಕುಳಿತು, ಇದನ್ನು ವೀಕ್ಷಿಸುತ್ತಿದ್ದು, ಬಳಿಕ ಆ ಮರಿಯನ್ನು ತೆಗೆದುಕೊಂಡು ಅದರ ತಾಯಿಯ ಬಳಿ ಬಿಟ್ಟಿದ್ದಾರೆ ರೈತರು.
ಇದೇ ಖುಷಿಯಲ್ಲಿ ಒಂದನ್ನೊಂದು ತಬ್ಬಿಕೊಂಡ ತಾಯಿ-ಮರಿ ಇಬ್ಬರೂ ಅಲ್ಲಿಂದ ಓಡಿಹೋಗಿವೆ. ಮೂಕ ಪ್ರಾಣಿಗಳ ನೆರವಿಗೆ ಬಂದ ರೈತರನ್ನು ಹೀರೋಗಳು ಎಂದು ಶ್ಲಾಘಿಸಿದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಮೆನ್ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/SudhaRamenIFS/status/1270951247944663040?ref_src=twsrc%5Etfw%7Ctwcamp%5Etweetembed%7Ctwterm%5E1270951247944663040&ref_url=https%3A%2F%2Fwww.timesnownews.com%2Fthe-buzz%2Farticle%2Fbaby-langur-trapped-in-net-rescued-by-farmers-reunites-with-mother-in-heartwarming-video-watch%2F605857