alex Certify ʼಆಯುಷ್ಮಾನ್‌ ಭಾರತ್ʼ ಕಾರ್ಡ್‌ ಮಾಡಿಸಿಕೊಳ್ಳುವುದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಯುಷ್ಮಾನ್‌ ಭಾರತ್ʼ ಕಾರ್ಡ್‌ ಮಾಡಿಸಿಕೊಳ್ಳುವುದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಮೋದಿ ಸರ್ಕಾರ ಜನರಿಗಾಗಿ ʼಆಯುಷ್ಮಾನ್ ಭಾರತ್ʼ ಯೋಜನೆ ನಡೆಸುತ್ತಿದೆ. ಇದನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯುತ್ತಾರೆ. ಮೋದಿ ಕೇರ್ ಎಂದು ಕರೆಯಲ್ಪಡುವ ಈ ಯೋಜನೆಯು ದೇಶದ ಬಡ ಜನರ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ದೇಶದ 10 ಕೋಟಿ ಕುಟುಂಬಗಳಿಗೆ ವಾರ್ಷಿಕವಾಗಿ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುತ್ತದೆ.

ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಈ ಯೋಜನೆಗೆ ಸೇರಿಸುವುದು ಮೋದಿ ಸರ್ಕಾರದ ಪ್ರಯತ್ನವಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಸೇರಲು ಕುಟುಂಬದ ಗಾತ್ರ ಮತ್ತು ವಯಸ್ಸಿನ ಯಾವುದೇ ಮಿತಿಯಿಲ್ಲ. ʼಆಯುಷ್ಮಾನ್ ಭಾರತ್ʼ ಯೋಜನೆ ಫಲಾನುಭವಿಗಳಿಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ನಗದು ರಹಿತ, ಕಾಗದ ರಹಿತ ಚಿಕಿತ್ಸೆ ನೀಡಲಾಗುತ್ತದೆ.

ಎಸ್‌ಇಸಿಸಿ ಅಂಕಿ ಅಂಶಗಳ ಪ್ರಕಾರ, ಗ್ರಾಮೀಣ ಜನಸಂಖ್ಯೆಯಲ್ಲಿ ಡಿ 1, ಡಿ 2, ಡಿ 3, ಡಿ 4, ಡಿ 5 ಮತ್ತು ಡಿ 7 ವರ್ಗಗಳಿಗೆ ಸೇರಿದ ಜನರನ್ನು ಆಯುಷ್ಮಾನ್ ಭಾರತ್ ಯೋಜನೆಗೆ ಸೇರಿಸಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿನ  ಪೂರ್ವ ನಿರ್ಧಾರಿತ ಉದ್ಯೋಗಗಳು / ಕೆಲಸದ ಪ್ರಕಾರ ಜನರು ಆಯುಷ್ಮಾನ್ ಭಾರತ್ ಯೋಜನೆಗೆ ಸೇರಬಹುದು. ಈಗಾಗಲೇ ರಾಜ್ಯಗಳಲ್ಲಿ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆಯಲ್ಲಿ ಭಾಗಿಯಾಗಿರುವವರು ಆಯುಷ್ಮಾನ್ ಭಾರತ್ ಯೋಜನೆಗೆ ಸೇರಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಮನೆಯಿಲ್ಲದ, ಕುಟುಂಬದಲ್ಲಿ ವಯಸ್ಕರಿಲ್ಲದ (16-59 ವರ್ಷಗಳು), ಕುಟುಂಬದ ಮುಖ್ಯಸ್ಥೆ ಮಹಿಳೆಯಾಗಿದ್ದರೆ, ಕುಟುಂಬದಲ್ಲಿ ಅಂಗವಿಕಲರಿದ್ದರೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಭೂಮಿ ಇಲ್ಲದ ವ್ಯಕ್ತಿಗೆ, ದೈನಂದಿನ ಕೂಲಿ ಕಾರ್ಮಿಕ, ನಿರ್ಗತಿಕ, ಭಿಕ್ಷೆ ಬೇಡುವ ವ್ಯಕ್ತಿ ಈ ಯೋಜನೆ ಸೇರಬಹುದು.

ನಗರ ಪ್ರದೇಶಗಳಲ್ಲಿ ಭಿಕ್ಷುಕರು, ಕಸ ತೆಗೆಯುವವರು, ಮನೆ ಕೆಲಸದವರು, ಬೀದಿ ಬದಿ ವ್ಯಾಪಾರಿಗಳು, ಚಮ್ಮಾರರು, ವ್ಯಾಪಾರಿಗಳು, ಇತರ ಬೀದಿ ಕಾರ್ಮಿಕರು. ನಿರ್ಮಾಣ ಸ್ಥಳದ ಕೆಲಸಗಾರರು, ಕೊಳಾಯಿಗಾರರು, ವರ್ಣಚಿತ್ರಕಾರರು, ವೆಲ್ಡರ್‌ಗಳು, ಭದ್ರತಾ ಸಿಬ್ಬಂದಿ, ಪೋರ್ಟರ್ ಮತ್ತು ಸ್ವೀಪರ್‌ಗಳು, ಗೃಹ ಕಾರ್ಮಿಕರು, ಕರಕುಶಲ ಕೆಲಸಗಾರರು, ಟೈಲರ್‌ಗಳು, ಚಾಲಕರು, ರಿಕ್ಷಾ ಚಾಲಕರು, ಅಂಗಡಿಯವರು ಇತ್ಯಾದಿಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸೇರಿಸಲಾಗುವುದು.

ಆಯುಷ್ಮಾನ್ ಭಾರತ್ ಯೋಜನೆ ಫಲಾನುಭವಿ ಆಸ್ಪತ್ರೆಗೆ ದಾಖಲಾಗಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆಸ್ಪತ್ರೆಯ ದಾಖಲಾತಿಯಿಂದ ಚಿಕಿತ್ಸೆಯವರೆಗಿನ ಎಲ್ಲಾ ವೆಚ್ಚಗಳನ್ನು ಈ ಯೋಜನೆ ಒಳಗೊಂಡಿರುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು ಯಾವುದೇ ಔಪಚಾರಿಕ ಪ್ರಕ್ರಿಯೆಗಳಿಲ್ಲ. ಅರ್ಹತೆ ಪಡೆದ ನಂತರ ನೇರ ಚಿಕಿತ್ಸೆಗೆ ಒಳಗಾಗಬಹುದು. ಸರ್ಕಾರದಿಂದ ಗುರುತಿಸಲ್ಪಟ್ಟ ಕುಟುಂಬಗಳ ಜನರು ಎಬಿವೈಗೆ ಸೇರಬಹುದು.

ಈ ಯೋಜನೆ ಮಾಡಿಸಲು ಮೊದಲು ಪ್ರಧಾನಿ ಆಯುಷ್ಮಾನ್ ಭಾರತ್ ಯೋಜನೆ ಅಧಿಕೃತ ವೆಬ್‌ಸೈಟ್‌ pmjay.gov.in. ಗೆ ಭೇಟಿ ನೀಡಬೇಕು. ನಂತರ ಅಧಿಕೃತ ವೆಬ್‌ಸೈಟ್‌ನ ಮುಖಪುಟದಲ್ಲಿ ಎಎಮ್ ಐ ಎಲಿಜಿಬಲ್ ಆಯ್ಕೆಯು ಕಾಣಿಸುತ್ತದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿ. ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಹೊಸ ವಿಂಡೋ ತೆರೆಯುತ್ತದೆ.

ಅದರ ನಂತರ ಅರ್ಹ ವಿಭಾಗದ ಅಡಿಯಲ್ಲಿ ಲಾಗಿನ್ ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಟಿಪಿ ಯೊಂದಿಗೆ ಪರಿಶೀಲಿಸಿ. ಲಾಗಿನ್ ಮಾಡಿದ ನಂತರ, ಪ್ರಧಾನಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅವರ ಕುಟುಂಬದ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಇದರ ನಂತರ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಮೊದಲ ಆಯ್ಕೆಯಲ್ಲಿ ನಿಮ್ಮ ರಾಜ್ಯವನ್ನು ಆರಿಸಿ. ಇದರ ನಂತರ, ಎರಡನೆಯ ಆಯ್ಕೆಯಲ್ಲಿ, ಮೂರು ಕಟಗರಿ ಇರುತ್ತದ. ಹೆಸರು, ಪಡಿತರ ಕಾರ್ಡ್‌ ಮತ್ತು ಮೊಬೈಲ್ ಸಂಖ್ಯೆಯಿಂದ ಕೊಟ್ಟಿರುವ ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸಲ್ಲಿಸುವ ಬಟನ್ ಕ್ಲಿಕ್ ಮಾಡಿ.

ಆಫ್ಲೈನ್ ನಲ್ಲಿ ಕೂಡ ನೀವು ಸಲ್ಲಿಸಬಹುದು. ಪ್ರಧಾನಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು, ಮೊದಲು ಜನ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ಎಲ್ಲಾ ಮೂಲ ದಾಖಲೆಗಳ ಫೋಟೋಕಾಪಿಯನ್ನು ಸಲ್ಲಿಸಿ. ಇದರ ನಂತರ, ಎಲ್ಲಾ ದಾಖಲೆಗಳನ್ನು ಸಾರ್ವಜನಿಕ ಸೇವಾ ಕೇಂದ್ರದ ನೌಕರ ಪರಿಶೀಲಿಸುತ್ತಾರೆ. ಯೋಜನೆಗೆ ಯೋಗ್ಯವಾಗಿದ್ದರೆ ನೋಂದಣಿ ಮಾಡಿಕೊಳ್ಳುತ್ತಾರೆ. ನೋಂದಣಿ ಮಾಡಿದ 10 ರಿಂದ 15 ದಿನಗಳ ನಂತರ ನಿಮಗೆ ಸೇವಾ ಕೇಂದ್ರದ ಮೂಲಕ ಆಯುಷ್ಮಾನ್ ಭಾರತದ ಗೋಲ್ಡನ್ ಕಾರ್ಡ್ ನೀಡಲಾಗುವುದು.

ಈ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಹಾಯವಾಣಿ ಸಂಖ್ಯೆ 14255 ರ ಮೂಲಕ ಪಡೆಯಬಹುದು. ಇಲ್ಲವೆ https://www.pmjay.gov.in/ ವೆಬ್ಸೈಟ್ ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಈ ಯೋಜನೆಗೆ ಹೆಸರು ನೋಂದಾಯಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ, ಸರ್ಕಾರಿ ಐಡಿ, ದತ್ತು ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಚಾಲನಾ ಪರವಾನಗಿ, ಕಿಸಾನ್ ಫೋಟೋ ಬುಕ್, ಮತದಾರರ ಚೀಟಿ, ಅಂಗವೈಕಲ್ಯದ ಐಡಿ ಸೇರಿದಂತೆ ಫೋಟೋ ಹೊಂದಿದ ದಾಖಲೆಯನ್ನು ನೀಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...