ಕೋವಿಡ್-19 ಸೋಂಕು ಹಬ್ಬುವುದನ್ನು ತಪ್ಪಿಸಲು ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಅಸ್ಸಾಂ ರೈಫಲ್ಸ್ ಈಶಾನ್ಯ ರಾಜ್ಯವಾದ ಮಿಝೋರಾಂನಲ್ಲಿ ವಿಶೇಷವಾದ ಅಭಿಯಾನಕ್ಕೆ ಮುಂದಾಗಿದೆ.
ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ಅಡಿಯಲ್ಲಿ ಬರುವ ಅಸ್ಸಾಂ ರೈಫಲ್ಸ್, ಮಿಝೋರಾಂನ ಐಝಾಲ್ ಜಿಲ್ಲೆಯ ಕೆಲ ಊರುಗಳಲ್ಲಿ ಮಾನ್ಸೂನ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಛತ್ರಿಗಳನ್ನು ವಿತರಣೆ ಮಾಡಿದ್ದಲ್ಲದೇ ಸೋಂಕು ಹಬ್ಬುವುದನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಆಸ್ಸಾಂ ರೈಫಲ್ಸ್‌ನ ಈ ಕ್ರಮಕ್ಕೆ ಗ್ರಾಮಸ್ಥರುಗಳಿಂದ ಅತ್ಯುತ್ತಮ ಪ್ರತಿಕ್ರಿಯೆಗಳು ಬಂದಿದ್ದು, ಛತ್ರಿಗಳನ್ನು ಹಿಡಿದುಕೊಳ್ಳುವ ಮೂಲಕ ತನ್ನಿಂತಾನೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೈಂಕರ್ಯಕ್ಕೆ ಮುಂದಾಗಲು ಪ್ರೇರೇಪಣೆ ನೀಡುವ ಈ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗತೊಡಗಿವೆ.