alex Certify ಒಬ್ಬಂಟಿ ವೃದ್ದನ ಹುಟ್ಟುಹಬ್ಬ ಆಚರಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬಂಟಿ ವೃದ್ದನ ಹುಟ್ಟುಹಬ್ಬ ಆಚರಿಸಿದ ಪೊಲೀಸರು

ಕರೊನಾ ಲಾಕ್ಡೌನ್ ವಿಶ್ವಾದ್ಯಂತ ಒಬ್ಬಂಟಿಯಾಗಿ ಇರುವ ಹಿರಿಯರನ್ನು ಸಾಕಷ್ಟು ಗೋಳಾಡಿದೆ. ಒಂದು ಕಡೆ ಹಿರಿಯರು ಬಲಿಯಾಗುವ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸಾಕಷ್ಟು ಆತಂಕದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸಗಳು ಪೊಲೀಸರ ಕಡೆಯಿಂದ ನಡೆದಿದೆ.

ಇಟಲಿ, ಸ್ಪೇನ್ ಸೇರಿ ವಿವಿಧ ದೇಶಗಳಲ್ಲಿ ಅಲ್ಲಿನ ಪೊಲೀಸರು, ಒಬ್ಬಂಟಿಯಾದ ಹಿರಿಯರನ್ನು ಭೇಟಿ ಮಾಡಿ ಸಂತೋಷವಾಗಿರಿಸಲು ಪ್ರಯತ್ನಿಸಿದ್ದ ಪ್ರಸಂಗಗಳು ನಮ್ಮ ‌ದೇಶದ ಪೊಲೀಸರಿಗೂ ಪ್ರೇರೇಪಣೆ ನೀಡಿದೆ. ಇತ್ತೀಚೆಗೆ ಅಸ್ಸಾಂ ಪೊಲೀಸರು ನಾಗೋನ್ ಎಂಬಲ್ಲಿ 78 ವರ್ಷದ ವೃದ್ಧ ಕೆ.ಪಿ. ಅಗರ್ವಾಲ್ ಹುಟ್ಟುಹಬ್ಬವನ್ನು ಆಚರಿಸಿದರು.

ಒಬ್ಬಂಟಿಯಾಗಿದ್ದ ವೃದ್ಧರ ಮನೆಯ ಬಾಗಿಲು ಬಡಿದ ಪೊಲೀಸರು ಶುಭಾಶಯ ಕೋರಿದರು. ಬಳಿಕ ಬರ್ತ್ ಡೇ ಕ್ಯಾಪ್ ತೊಡಿಸಿ ಸಿಹಿ ತಿನಿಸಿದರು. ಬಳಿಕ ನಾನು ನಿಮ್ಮ ಮಗ, ನಾನು ನಿಮ್ಮ ಮಗಳು ಎಂದು ಬರೆದ ಪೋಸ್ಟರ್ ಗಳನ್ನು ಹಿಡಿದು ಸಂತೋಷಪಡಿಸಿದರು. ಜನ್ಮದಿನದ ಶುಭಾಶಯದ ಹಾಡು ಹಾಡಿ ಖುಷಿ ಪಡಿಸಿದರು. ಈ ಹುಟ್ಟುಹಬ್ಬ ಆಚರಣೆಯ ವಿಡಿಯೋ ವನ್ನು ಅಸ್ಸಾಂ ‌ಪೊಲೀಸರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

https://twitter.com/assampolice/status/1257332299248607232?ref_src=twsrc%5Etfw%7Ctwcamp%5Etweetembed%7Ctwterm%5E1257332299248607232%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fassam-police-planned-a-delightful-surprise-for-a-78-year-old-man-living-alone-on-his-birthday-watch%2F588403

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...