ನಿಮ್ಮ ಪ್ರೀತಿಯನ್ನ ಪಡೆಯಲಿಕ್ಕೋಸ್ಕರ ನೀವು ಯಾವ್ಯಾವ ಸಾಹಸವನ್ನ ಮಾಡಲು ತಯಾರಿದ್ದೀರಾ..? ಈ ಪ್ರಶ್ನೆಯನ್ನ ಇಲ್ಲೇಕೆ ಕೇಳ್ತಿದ್ದಾರೆ ಎಂದುಕೊಂಡ್ರಾ..? ಇದಕ್ಕೆ ಕಾರಣ ಕೂಡ ಇದೆ. ಆಸ್ಸಾಂನ ವ್ಯಕ್ತಿಯೊಬ್ಬ ಲಾಕ್ಡೌನ್ ಸಮಯದಲ್ಲಿ ತನ್ನ ಗರ್ಲ್ಫ್ರೆಂಡ್ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಬೇಕು ಅಂತಾ ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ನಂತೆ ನಟಿಸಿದ್ದಾನೆ..!
ಜೋರ್ಹಟ್ ಜಿಲ್ಲೆಯ ಟಿಟಾಬೊರ್ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಆಸ್ಸಾಂ ಪೊಲೀಸರು ಕೊನೆಗೂ ಈ ವ್ಯಕ್ತಿಯ ಕಳ್ಳಾಟವನ್ನ ಪತ್ತೆ ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೆ. ಬಿಸ್ವಜಿತ್ ದತ್ತಾ ಎಂಬಾತ ಧೆಕೈಜುಲಿ ಎಂಬಲ್ಲಿ ನಡೆಯುತ್ತಿದ್ದ ಬರ್ತಡೆ ಪಾರ್ಟಿಯನ್ನ ಅಟೆಂಡ್ ಮಾಡಬೇಕು ಅಂತಾ ಭರ್ಜರಿ ಪ್ಲಾನ್ ಒಂದನ್ನ ಮಾಡಿದ್ದ. ಇದಕ್ಕಾಗಿ ಆತ ಕಾರನ್ನ ಬಾಡಿಗೆಗೆ ಪಡೆದು ಜಿಲ್ಲಾ ಮ್ಯಾಜಿಸ್ಟ್ರೇಟ್ನಂತೆ ನಟಿಸುತ್ತಾ ಪಾರ್ಟಿಯಲ್ಲಿ ಭಾಗಿಯಾಗಿದ್ದಾನೆ.
ಸ್ಯಾನಿಟೈಸರ್ನಿಂದ ಆಲ್ಕೋಹಾಲ್ ತಯಾರಿಸಲು ಮುಂದಾದ ಆರು ಮಂದಿ ಅರೆಸ್ಟ್
ದುಡ್ಡು ಕೊಡುತ್ತೇನೆ ಎಂದು ನಂಬಿಸಿ ಕಾರಿಗೆ ಒಬ್ಬ ಚಾಲಕನನ್ನೂ ಬಿಸ್ವಜೀತ್ ನೇಮಿಸಿಕೊಂಡಿದ್ದ. ಈ ಘಟನೆ ಬಗ್ಗೆ ಡ್ರೈವರ್ ಮಾತನಾಡಿದ್ದು, ನಾನು ಆತನನ್ನ ಬರ್ತಡೇ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಕರೆದೊಯ್ದಿದ್ದೆ. ಆತನನ್ನ ನಾನು ಆವತ್ತು ತುಂಬಾ ಏರಿಯಾಗಳಿಗೆ ಕರೆದೊಯ್ದಿದ್ದೆ. ಆವತ್ತು ನಾನು ಪೆಟ್ರೋಲ್ಗೆ ಅಂತಾನೇ 5000 ರೂಪಾಯಿ ಹಾಕಿದ್ದೆ ಎಂದು ಹೇಳಿದ್ದಾನೆ.