ಅಸ್ಸಾಂ ರಾಜ್ಯ ದ ಗುವಾಹಟಿಯ ಝೂನಲ್ಲಿ ಹುಲಿಗಳಿಗೆ ದನದ ಮಾಂಸ ನೀಡೋದನ್ನ ವಿರೋಧಿಸಿ ಹಿಂದೂ ಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ.
ಝೂಗೆ ಮಾಂಸವನ್ನ ಸಾಗಿಸ್ತಾ ಇದ್ದ ವಾಹನಗಳನ್ನ ತಡೆಹಿಡಿದಿದ್ದು ಮಾತ್ರವಲ್ಲದೇ ಮೃಗಾಲಯ ಮುಂಭಾಗದ ರಸ್ತೆಯನ್ನ ಬ್ಲಾಕ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ರು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಎಫ್ಓ ತೇಜಸ್ ಮರಿಸ್ವಾಮಿ, ಪ್ರತಿಭಟನಾಕಾರರು ಪ್ರಾಣಿಗಳಿಗೆ ನೀಡಲಾಗ್ತಿದ್ದ ಮಾಂಸವನ್ನ ಸಾಗಿಸುವ ಗಾಡಿಯನ್ನ ತಡೆಹಿಡಿದಿದ್ರು. ನಾವು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪೊಲೀಸರ ಆಗಮನದಿಂದಾಗಿ ಮೃಗಾಲಯದ ಪ್ರಾಣಿಗಳಿಗೆ ನೀಡಲಾಗೋ ಆಹಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಅಂತಾ ಹೇಳಿದ್ರು.
1957ರಲ್ಲಿ ಆರಂಭಗೊಂಡ ಈ ಮೃಗಾಲಯ ಗುವಾಹಟಿಯ ಹೆಂಗ್ರಬರಿ ಸಂರಕ್ಷಿತ ಅರಣ್ಯ ಪ್ರದೇಶದ 175 ಹೆಕ್ಟೇರ್ ಜಾಗವನ್ನ ಹೊಂದಿದೆ. 1,040 ಬಗೆಯ ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳನ್ನ ಹೊಂದಿರುವ ಈ ಮೃಗಾಲಯ ಈಶಾನ್ಯ ರಾಜ್ಯಗಳ ಪೈಕಿ ಅತಿ ದೊಡ್ಡ ಮೃಗಾಲಯವಾಗಿದೆ.