alex Certify ಡೆತ್​ನೋಟ್​ ಬಿಚ್ಚಿಡ್ತು ಮಹಿಳೆ ಆತ್ಮಹತ್ಯೆ ಹಿಂದಿನ ರಹಸ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆತ್​ನೋಟ್​ ಬಿಚ್ಚಿಡ್ತು ಮಹಿಳೆ ಆತ್ಮಹತ್ಯೆ ಹಿಂದಿನ ರಹಸ್ಯ….!

34 ವರ್ಷದ ಮಹಿಳೆಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆಯೊಂದು ಆಸ್ಸಾಂನ ಕಚಾರ್​ ಜಿಲ್ಲೆಯಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್​ ನೋಟ್​ ಲಭ್ಯವಾಗಿದ್ದು ತಾನು ಈ ನಿರ್ಧಾರವನ್ನ ಕೈಗೊಳ್ಳಲು ಬಾಯ್​ಫ್ರೆಂಡ್​ ಕಾರಣ ಎಂದು ಬರೆಯಲಾಗಿದೆ.

ಮೃತ ಮಹಿಳೆಯನ್ನ ಲಿಪಿ ಸಾಪ್​ ಕನುಂಗೊ ಎಂದು ಗುರುತಿಸಲಾಗಿದೆ. ಈಕೆ ಮೋಟಾರ್​ಕಾರ್​ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಸಂಜೆ 7:30ರ ಸುಮಾರಿಗೆ ನೆರೆ ಹೊರೆಯವರು ಈಕೆ ನೇಣು ಬಿಗಿದ ಸ್ಥಿತಿಯಲ್ಲಿ ಇರೋದನ್ನ ಕಂಡಿದ್ದಾರೆ. ಬಳಿಕ ಪೊಲೀಸರಿಗೆ ಈ ಮಾಹಿತಿಯನ್ನ ರವಾನಿಸಿದ್ದಾರೆ.

ಲಿಪಿಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಡೆತ್​ನೋಟ್​ನಲ್ಲಿ ಈಕೆ ತನ್ನ ಸಾವಿಗೆ ಬಾಯ್​ಫ್ರೆಂಡ್ ಕಾರಣ ಎಂದು ಬರೆದಿದ್ದಾಳೆ. ಬಾಯ್​​ಫ್ರೆಂಡ್​ನ್ನು ಧ್ರುವಜ್ಯೋತಿ ನಾತ್​ ಎಂದು ಗುರುತಿಸಲಾಗಿದೆ. ದ್ರುವ್​ ಜ್ಯೋತಿ ನನಗೆ ಪ್ರೀತಿಯಲ್ಲಿ ಮೋಸ ಮಾಡಿದ್ದು ಬೇರೊಂದು ಮದುವೆಯಾಗಿದ್ದಾನೆ. ಹೀಗಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...