34 ವರ್ಷದ ಮಹಿಳೆಯೊಬ್ಬರು ತಮ್ಮ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆಯೊಂದು ಆಸ್ಸಾಂನ ಕಚಾರ್ ಜಿಲ್ಲೆಯಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು ತಾನು ಈ ನಿರ್ಧಾರವನ್ನ ಕೈಗೊಳ್ಳಲು ಬಾಯ್ಫ್ರೆಂಡ್ ಕಾರಣ ಎಂದು ಬರೆಯಲಾಗಿದೆ.
ಮೃತ ಮಹಿಳೆಯನ್ನ ಲಿಪಿ ಸಾಪ್ ಕನುಂಗೊ ಎಂದು ಗುರುತಿಸಲಾಗಿದೆ. ಈಕೆ ಮೋಟಾರ್ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಸಂಜೆ 7:30ರ ಸುಮಾರಿಗೆ ನೆರೆ ಹೊರೆಯವರು ಈಕೆ ನೇಣು ಬಿಗಿದ ಸ್ಥಿತಿಯಲ್ಲಿ ಇರೋದನ್ನ ಕಂಡಿದ್ದಾರೆ. ಬಳಿಕ ಪೊಲೀಸರಿಗೆ ಈ ಮಾಹಿತಿಯನ್ನ ರವಾನಿಸಿದ್ದಾರೆ.
ಲಿಪಿಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಡೆತ್ನೋಟ್ನಲ್ಲಿ ಈಕೆ ತನ್ನ ಸಾವಿಗೆ ಬಾಯ್ಫ್ರೆಂಡ್ ಕಾರಣ ಎಂದು ಬರೆದಿದ್ದಾಳೆ. ಬಾಯ್ಫ್ರೆಂಡ್ನ್ನು ಧ್ರುವಜ್ಯೋತಿ ನಾತ್ ಎಂದು ಗುರುತಿಸಲಾಗಿದೆ. ದ್ರುವ್ ಜ್ಯೋತಿ ನನಗೆ ಪ್ರೀತಿಯಲ್ಲಿ ಮೋಸ ಮಾಡಿದ್ದು ಬೇರೊಂದು ಮದುವೆಯಾಗಿದ್ದಾನೆ. ಹೀಗಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದಿದ್ದಾಳೆ.