alex Certify ಕಡಿದಾದ ರಸ್ತೆಯಲ್ಲಿ ಜೀಪ್‌ ಚಲಾಯಿಸಿದ ಸಿಎಂ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿದಾದ ರಸ್ತೆಯಲ್ಲಿ ಜೀಪ್‌ ಚಲಾಯಿಸಿದ ಸಿಎಂ – ವಿಡಿಯೋ ವೈರಲ್

ಗುಡ್ಡಗಾಡು ಪ್ರದೇಶಗಳಲ್ಲಿ ಜೀಪುಗಳಲ್ಲಿ ಪ್ರಯಾಣ ಮಾಡೋದು ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಒದ್ದೆ ಮಣ್ಣಿನ ಮೇಲೆ ಟೈರ್​ಗಳು ಸಿಕ್ಕಿ ಹಾಕಿಕೊಂಡರಂತೂ ಕತೆ ಮುಗೀತು ಅಂತಾನೇ ಲೆಕ್ಕ.

ಕಿರಿದಾದ ರಸ್ತೆಗಳಲ್ಲಿ ಒದ್ದೆ ಮಣ್ಣಿನಲ್ಲಿ ಟೈರ್​ಗಳು ಹೂತುಕೊಂಡಾಗ ವಾಹನವನ್ನ ಇದರಿಂದ ತಪ್ಪಿಸುವ ಕಷ್ಟ ಅನುಭವಿಸಿದವನಿಗೇ ಗೊತ್ತು. ಇಂತಹ ಜಾಗಗಳಲ್ಲಿ ವಾಹನ ಚಲಾಯಿಸುವ ಮುನ್ನ ಚಾಲಕರು ಎರಡು ಬಾರಿ ಯೋಚನೆ ಮಾಡ್ತಾರೆ.

ಆದರೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಾಂಡು ಮಹೀಂದ್ರಾ ಥಾರ್​ ಎಸ್​ಯುವಿ ವಾಹನದಲ್ಲಿ ಕಷ್ಟಕರವಾದ ಭೂಪ್ರದೇಶದಲ್ಲಿ ಪ್ರಯಾಣ ಮಾಡಿದ್ದಾರೆ.

ಈ ಮೂಲಕ ಪೆಮಾ ಖಾಂಡು, ಆನಂದ್​ ಮಹಿಂದ್ರಾ ಬಳಿಯೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಪೆಮಾ ಖಾಂಡುರ ಸಾಹಸಮಯ ಪ್ರಯಾಣದ ವಿಡಿಯೋವನ್ನ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಥಾರ್ ವಾಹನಗಳನ್ನ ಬಳಸಿ ಅಸಾಧ್ಯವನ್ನೂ ಸಾಧಿಸುವ ವಾಹನಗಳ ಮಾಲೀಕರನ್ನ ಗೌರವಿಸಬೇಕು ಎಂದು ನನಗನಿಸುತ್ತಿದೆ. ಥಾರ್​ ಪೈಲ್ವಾನ್​​ಗಳು ಎನ್ನಬಹುದೇ..? ಇಲ್ಲವೇ ಇವರಿಗೆ ಇನ್ನೂ ಸೂಕ್ತವಾದ ಬೇರೆ ಹೆಸರನ್ನ ಹೇಳಬಲ್ಲಿರೇ..? ನಾನು ಈ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಗೆ ಖಾಂಡು ಅವರ ಹೆಸರನ್ನ ಸೂಚಿಸುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.

ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಕೊನೆಯ ಆಡಳಿತ ಕೇಂದ್ರ ಕಚೇರಿಯಾಗಿರುವ ಚಾಂಗ್ಲಾಂಗ್ ಜಿಲ್ಲೆಯ ವಿಜಯ್‌ನಗರ್ ತಲುಪಲು ಖಾಂಡು ಈ ಸಾಹಸ ಮಾಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...