ಗುಡ್ಡಗಾಡು ಪ್ರದೇಶಗಳಲ್ಲಿ ಜೀಪುಗಳಲ್ಲಿ ಪ್ರಯಾಣ ಮಾಡೋದು ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಒದ್ದೆ ಮಣ್ಣಿನ ಮೇಲೆ ಟೈರ್ಗಳು ಸಿಕ್ಕಿ ಹಾಕಿಕೊಂಡರಂತೂ ಕತೆ ಮುಗೀತು ಅಂತಾನೇ ಲೆಕ್ಕ.
ಕಿರಿದಾದ ರಸ್ತೆಗಳಲ್ಲಿ ಒದ್ದೆ ಮಣ್ಣಿನಲ್ಲಿ ಟೈರ್ಗಳು ಹೂತುಕೊಂಡಾಗ ವಾಹನವನ್ನ ಇದರಿಂದ ತಪ್ಪಿಸುವ ಕಷ್ಟ ಅನುಭವಿಸಿದವನಿಗೇ ಗೊತ್ತು. ಇಂತಹ ಜಾಗಗಳಲ್ಲಿ ವಾಹನ ಚಲಾಯಿಸುವ ಮುನ್ನ ಚಾಲಕರು ಎರಡು ಬಾರಿ ಯೋಚನೆ ಮಾಡ್ತಾರೆ.
ಆದರೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಾಂಡು ಮಹೀಂದ್ರಾ ಥಾರ್ ಎಸ್ಯುವಿ ವಾಹನದಲ್ಲಿ ಕಷ್ಟಕರವಾದ ಭೂಪ್ರದೇಶದಲ್ಲಿ ಪ್ರಯಾಣ ಮಾಡಿದ್ದಾರೆ.
ಈ ಮೂಲಕ ಪೆಮಾ ಖಾಂಡು, ಆನಂದ್ ಮಹಿಂದ್ರಾ ಬಳಿಯೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಪೆಮಾ ಖಾಂಡುರ ಸಾಹಸಮಯ ಪ್ರಯಾಣದ ವಿಡಿಯೋವನ್ನ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಥಾರ್ ವಾಹನಗಳನ್ನ ಬಳಸಿ ಅಸಾಧ್ಯವನ್ನೂ ಸಾಧಿಸುವ ವಾಹನಗಳ ಮಾಲೀಕರನ್ನ ಗೌರವಿಸಬೇಕು ಎಂದು ನನಗನಿಸುತ್ತಿದೆ. ಥಾರ್ ಪೈಲ್ವಾನ್ಗಳು ಎನ್ನಬಹುದೇ..? ಇಲ್ಲವೇ ಇವರಿಗೆ ಇನ್ನೂ ಸೂಕ್ತವಾದ ಬೇರೆ ಹೆಸರನ್ನ ಹೇಳಬಲ್ಲಿರೇ..? ನಾನು ಈ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಗೆ ಖಾಂಡು ಅವರ ಹೆಸರನ್ನ ಸೂಚಿಸುತ್ತೇನೆ ಎಂದು ಟ್ವೀಟಾಯಿಸಿದ್ದಾರೆ.
ಇಂಡೋ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಕೊನೆಯ ಆಡಳಿತ ಕೇಂದ್ರ ಕಚೇರಿಯಾಗಿರುವ ಚಾಂಗ್ಲಾಂಗ್ ಜಿಲ್ಲೆಯ ವಿಜಯ್‌ನಗರ್ ತಲುಪಲು ಖಾಂಡು ಈ ಸಾಹಸ ಮಾಡಿದ್ದರು.
https://twitter.com/anandmahindra/status/1377197648461983748