ಶ್ರೀನಗರದ ಜಬರ್ವಾನ್ ಪರ್ವತ ಶ್ರೇಣಿಯಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್ ಉದ್ಯಾನವನವು ಭಾರೀ ಫೇಮಸ್ ಆಗಿದೆ. ಕಳೆದ ಐದು ದಿನಗಳಲ್ಲಿ ಈ ಉದ್ಯಾನವನಕ್ಕೆ ಸರಿ ಸುಮಾರು 50 ಸಾವಿರ ಜನರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
35 ಎಕರೆ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನದಲ್ಲಿ 15 ಲಕ್ಷ ವೈವಿಧ್ಯದ ಟ್ಯೂಲಿಪ್ ಹೂಗಳಿವೆ. ಈ ಉದ್ಯಾನವನ್ನ ಲೆಫ್ಟಿನಂಟ್ ಜನರಲ್ ಸಲಹೆಗಾರ ಅಹಮದ್ ಖಾನ್ ಮಾರ್ಚ್ 25ರಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ರು.
ಮೊದಲ ದಿನವೇ ಈ ಉದ್ಯಾನವನಕ್ಕೆ 4500 ಮಂದಿ ಭೇಟಿ ನೀಡಿದ್ದರು. ಕಳೆದ 5 ದಿನಗಳಲ್ಲಿ ಒಟ್ಟು 48 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ ದೇಶಿ ಹಾಗೂ ವಿದೇಶಿ ಪ್ರಜೆಗಳು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ಟ್ಯುಲಿಪ್ ಹಬ್ಬವನ್ನ ಮಾಡೋಕೆ ಪ್ರವಾಸೋದ್ಯಮ ಇಲಾಖೆ ನಿರ್ಧಾರ ಕೈಗೊಂಡಿದೆ. ಈ ಸಮಯದಲ್ಲಿ ಟ್ಯುಲಿಪ್ ಹೆಚ್ಚಿನ ಸಂಖ್ಯೆಯಲ್ಲಿ ಅರಳೋದ್ರಿಂದಾಗಿ ಪ್ರವಾಸಿಗರ ಕಣ್ಣಿಗೆ ಇನ್ನಷ್ಟು ಮಜಾ ಸಿಗಲಿದೆ.