alex Certify 200 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಅರ್ನಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಅರ್ನಬ್

ಟೆಲಿವಿಷನ್​ ರೇಟಿಂಗ್ ಅಕ್ರಮ ಆರೋಪ ಎದುರಿಸುತ್ತಿರೋ ರಿಪಬ್ಲಿಕ್​ ಟಿವಿ ಮುಂಬೈ ಪೊಲೀಸ್​ ಕಮಿಷನರ್​ ಪರಮ್​ ಬಿರ್​ ಸಿಂಗ್​ ವಿರುದ್ಧ 200 ಕೋಟಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಹೇಳಿದೆ.

ರಿಪಬ್ಲಿಕ್​ ಟಿವಿ ಮೇಲೆ ದಾಖಲಾಗಿರುವ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಎಆರ್​ಜಿ ಔಟ್​ಲೇಯರ್​ ಮೀಡಿಯಾ ಪ್ರೈವೇಟ್​ ಲಿಮಿಟೆಡ್​ ಹಾಗೂ ಅರ್ನಬ್​ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನ ಬಾಂಬೆ ಹೈಕೋರ್ಟ್ ಸೋಮವಾರ ಆಲಿಸಿದೆ.

ಅರ್ಜಿದಾರರ ಪರ ಮಾತನಾಡಿದ ವಕೀಲರು, ಪೊಲೀಸರು ಅರ್ನಬ್​ರನ್ನ ಗುರಿಯಾಗಿಸಿಕೊಂಡಿದ್ದಾರೆ ಹಾಗೂ ಅವರನ್ನ ಬಂಧಿಸುತ್ತಾರೆ ಎಂಬ ಆತಂಕ ಇದೆ ಅಂತಾ ಕೋರ್ಟ್ ಮುಂದೆ ವಾದ ಮಂಡಿಸಿದ್ರು .

ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ಪರ ಕೋರ್ಟ್​ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್​ ಸಿಬಲ್​, ಟಿಆರ್​ಪಿ ಪ್ರಕರಣ ಸಂಬಂಧ ಈವರೆಗೆ 8 ಜನಕ್ಕೆ ಸಮನ್ಸ್ ಜಾರಿ ಮಾಡಲಾಗಿದೆ ಹಾಗೂ ಅವರನ್ನ ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಅಂತಾ ಹೇಳಿದ್ರು.

ಪ್ರಕರಣದಲ್ಲಿ ಅರ್ನಬ್​ ಹೆಸರು ಆರೋಪಿಗಳ ಪಟ್ಟಿಯಲ್ಲಿ ಇಲ್ಲವಾದ್ದರಿಂದ ಅವರಿಗೆ ರಕ್ಷಣೆ ನೀಡುವ ಪ್ರಶ್ನೆಯೇ ಬರೋದಿಲ್ಲ. ಒಂದು ವೇಳೆ ಅರ್ನಬ್​ ಪ್ರಕರಣ ಆರೋಪಿಗಳೆಂದು ಪರಿಗಣಿಸಿದ್ರೆ ಉಳಿದ 8 ಜನರಂತೆ ಇವರಿಗೂ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗುತ್ತೆ. ಪೊಲೀಸರ ತನಿಖೆಗೆ ಅರ್ನಬ್​ ಸಹಕರಿಸಬೇಕು ಅಂತಾ ಕೋರ್ಟ್ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...