ಟೆಲಿವಿಷನ್ ರೇಟಿಂಗ್ ಅಕ್ರಮ ಆರೋಪ ಎದುರಿಸುತ್ತಿರೋ ರಿಪಬ್ಲಿಕ್ ಟಿವಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ವಿರುದ್ಧ 200 ಕೋಟಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಹೇಳಿದೆ.
ರಿಪಬ್ಲಿಕ್ ಟಿವಿ ಮೇಲೆ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಎಆರ್ಜಿ ಔಟ್ಲೇಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನ ಬಾಂಬೆ ಹೈಕೋರ್ಟ್ ಸೋಮವಾರ ಆಲಿಸಿದೆ.
ಅರ್ಜಿದಾರರ ಪರ ಮಾತನಾಡಿದ ವಕೀಲರು, ಪೊಲೀಸರು ಅರ್ನಬ್ರನ್ನ ಗುರಿಯಾಗಿಸಿಕೊಂಡಿದ್ದಾರೆ ಹಾಗೂ ಅವರನ್ನ ಬಂಧಿಸುತ್ತಾರೆ ಎಂಬ ಆತಂಕ ಇದೆ ಅಂತಾ ಕೋರ್ಟ್ ಮುಂದೆ ವಾದ ಮಂಡಿಸಿದ್ರು .
ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ಪರ ಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಟಿಆರ್ಪಿ ಪ್ರಕರಣ ಸಂಬಂಧ ಈವರೆಗೆ 8 ಜನಕ್ಕೆ ಸಮನ್ಸ್ ಜಾರಿ ಮಾಡಲಾಗಿದೆ ಹಾಗೂ ಅವರನ್ನ ವಿಚಾರಣೆಗೊಳಪಡಿಸಲಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಅಂತಾ ಹೇಳಿದ್ರು.
ಪ್ರಕರಣದಲ್ಲಿ ಅರ್ನಬ್ ಹೆಸರು ಆರೋಪಿಗಳ ಪಟ್ಟಿಯಲ್ಲಿ ಇಲ್ಲವಾದ್ದರಿಂದ ಅವರಿಗೆ ರಕ್ಷಣೆ ನೀಡುವ ಪ್ರಶ್ನೆಯೇ ಬರೋದಿಲ್ಲ. ಒಂದು ವೇಳೆ ಅರ್ನಬ್ ಪ್ರಕರಣ ಆರೋಪಿಗಳೆಂದು ಪರಿಗಣಿಸಿದ್ರೆ ಉಳಿದ 8 ಜನರಂತೆ ಇವರಿಗೂ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗುತ್ತೆ. ಪೊಲೀಸರ ತನಿಖೆಗೆ ಅರ್ನಬ್ ಸಹಕರಿಸಬೇಕು ಅಂತಾ ಕೋರ್ಟ್ ಹೇಳಿದೆ.