alex Certify ಆಪಲ್​ ಸ್ಮಾರ್ಟ್​ ವಾಚ್​​ ನಿಂದ ತಿಳಿಯುತ್ತೆ ʼಕೊರೊನಾʼ ಮುನ್ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್​ ಸ್ಮಾರ್ಟ್​ ವಾಚ್​​ ನಿಂದ ತಿಳಿಯುತ್ತೆ ʼಕೊರೊನಾʼ ಮುನ್ಸೂಚನೆ

ಆರೋಗ್ಯದ ದೃಷ್ಟಿಯಿಂದ ಈಗೀಗ ಸ್ಮಾರ್ಟ್ ವಾಚ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಮಾರ್ಟ್​ ವಾಚ್​ ಹೃದಯ ಬಡಿತ ಹಾಗೂ ನೀವು ದಿನಕ್ಕೆ ಎಷ್ಟು ಸಮಯ ನಡೆಯುತ್ತೀರಿ ಹೀಗೆ ವಿವಿಧ ವಿವರಣೆಗಳನ್ನ ನೀಡುತ್ತೆ ಅನ್ನೋ ವಿಚಾರ ನಿಮಗೆ ತಿಳಿದಿದೆ. ಆದರೆ ಮೌಂಟ್​ ಸಿನೈ ಆಸ್ಪತ್ರೆಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಆಪಲ್​ ವಾಚ್​​ಗಳು ಕೊರೊನಾದ ಬಗ್ಗೆಯೂ ಸೂಚನೆ ನೀಡ್ತವೆ ಎಂಬ ವಿಚಾರ ತಿಳಿದುಬಂದಿದೆ.

ಕೊರೊನಾ ತೀವ್ರಗತಿಯಲ್ಲಿ ಹರಡಿದ್ದ ಸಂದರ್ಭ ಅಂದರೆ ಕಳೆದ ವರ್ಷ ಎಪ್ರಿಲ್​ ಹಾಗೂ ಸೆಪ್ಟೆಂಬರ್​ ತಿಂಗಳಲ್ಲಿ ಈ ಸಮೀಕ್ಷೆಯನ್ನ ನಡೆಸಲಾಗಿತ್ತು. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಆಪಲ್​ ವಾಚ್​ಗಳನ್ನ ನೀಡಲಾಗಿತ್ತು. ಹಾಗೂ ಇವರಿಗೆ ಕಸ್ಟಮೈಸಡ್​​ ಅಪ್ಲಿಕೇಶನ್​ ಮೂಲಕ ಇವರಿಗೆ ನಿತ್ಯ ಕೆಲ ಪ್ರಶ್ನೆಗಳನ್ನ ಕೇಳಲಾಗುತ್ತಿತ್ತು.

ಸಂಶೋಧಕರು ಭಾಗವಹಿಸಿದವರ ಹೃದಯ ಬಡಿತದಲ್ಲಿನ ಏರಿಳಿತಗಳನ್ನ ಗಮನಿಸಿ ಆ ವ್ಯಕ್ತಿ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಅಂದಾಜಿಸಿದ್ದಾರೆ. ಈ ಹೃದಯ ಬಡಿತದ ಏರಿಳಿತವನ್ನ ಆಪಲ್​ ಸ್ಮಾರ್ಟ್​ ವಾಚ್​ ಬಳಸಿ ದಾಖಲಿಸಲಾಗಿತ್ತು. ಇನ್ನುಳಿದಂತೆ ಜ್ವರ, ಶೀತ, ತಲೆನೋವು, ಸುಸ್ತಿನಂತಹ ಲಕ್ಷಣದ ಬಗ್ಗೆಯೂ ಸಂಶೋಧಕರು ಮಾಹಿತಿಯನ್ನ ಕಲೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...