ಆರೋಗ್ಯದ ದೃಷ್ಟಿಯಿಂದ ಈಗೀಗ ಸ್ಮಾರ್ಟ್ ವಾಚ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಮಾರ್ಟ್ ವಾಚ್ ಹೃದಯ ಬಡಿತ ಹಾಗೂ ನೀವು ದಿನಕ್ಕೆ ಎಷ್ಟು ಸಮಯ ನಡೆಯುತ್ತೀರಿ ಹೀಗೆ ವಿವಿಧ ವಿವರಣೆಗಳನ್ನ ನೀಡುತ್ತೆ ಅನ್ನೋ ವಿಚಾರ ನಿಮಗೆ ತಿಳಿದಿದೆ. ಆದರೆ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಆಪಲ್ ವಾಚ್ಗಳು ಕೊರೊನಾದ ಬಗ್ಗೆಯೂ ಸೂಚನೆ ನೀಡ್ತವೆ ಎಂಬ ವಿಚಾರ ತಿಳಿದುಬಂದಿದೆ.
ಕೊರೊನಾ ತೀವ್ರಗತಿಯಲ್ಲಿ ಹರಡಿದ್ದ ಸಂದರ್ಭ ಅಂದರೆ ಕಳೆದ ವರ್ಷ ಎಪ್ರಿಲ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಈ ಸಮೀಕ್ಷೆಯನ್ನ ನಡೆಸಲಾಗಿತ್ತು. ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಆಪಲ್ ವಾಚ್ಗಳನ್ನ ನೀಡಲಾಗಿತ್ತು. ಹಾಗೂ ಇವರಿಗೆ ಕಸ್ಟಮೈಸಡ್ ಅಪ್ಲಿಕೇಶನ್ ಮೂಲಕ ಇವರಿಗೆ ನಿತ್ಯ ಕೆಲ ಪ್ರಶ್ನೆಗಳನ್ನ ಕೇಳಲಾಗುತ್ತಿತ್ತು.
ಸಂಶೋಧಕರು ಭಾಗವಹಿಸಿದವರ ಹೃದಯ ಬಡಿತದಲ್ಲಿನ ಏರಿಳಿತಗಳನ್ನ ಗಮನಿಸಿ ಆ ವ್ಯಕ್ತಿ ಸೋಂಕಿನಿಂದ ಬಳಲುತ್ತಿದ್ದಾನೆ ಎಂದು ಅಂದಾಜಿಸಿದ್ದಾರೆ. ಈ ಹೃದಯ ಬಡಿತದ ಏರಿಳಿತವನ್ನ ಆಪಲ್ ಸ್ಮಾರ್ಟ್ ವಾಚ್ ಬಳಸಿ ದಾಖಲಿಸಲಾಗಿತ್ತು. ಇನ್ನುಳಿದಂತೆ ಜ್ವರ, ಶೀತ, ತಲೆನೋವು, ಸುಸ್ತಿನಂತಹ ಲಕ್ಷಣದ ಬಗ್ಗೆಯೂ ಸಂಶೋಧಕರು ಮಾಹಿತಿಯನ್ನ ಕಲೆ ಹಾಕಿದ್ದಾರೆ.