alex Certify ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್

ಮುಂಬೈ ಮೂಲದ ಉದ್ಯಮಿ ಕಿಶೋರ್​ ಫೊಗ್ಲಾ ಎಂಬವರು ಪ್ರಸ್ತುತ ನಡೆಯುತ್ತಿರುವ ಮಾಘ ಮೇಳಕ್ಕೆ ಅನುಕೂಲವಾಗುವಂತ ಧಾರ್ಮಿಕ ಅಪ್ಲಿಕೇಶನ್​ ಒಂದನ್ನ ಅಭಿವೃದ್ಧಿ ಪಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿ ನಡುವೆಯೂ ತೀರ್ಥಯಾತ್ರೆ ಮಾಡುವವರಿಗೆ ಈ ಮೊಬೈಲ್​ ಅಪ್ಲಿಕೇಶನ್​ ಸಹಕಾರಿಯಾಗಲಿದೆ.‌

ಭಗವಾನ್​ ಜಿ ಎಂಬ ಹೆಸರಿನ ಅಪ್ಲಿಕೇಶನ್​​ ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಧರ್ಮ – ಕರ್ಮ, ಪೂಜೆ, ವೃತ, ಹಬ್ಬ, ಈ ಎಲ್ಲದರ ಬಗ್ಗೆ ಈ ಅಪ್ಲಿಕೇಶನ್​ನಲ್ಲಿ ಮಾಹಿತಿ ಲಭ್ಯವಿದೆ. ಈ ಅಪ್ಲಿಕೇಶನ್​ ಮೂಲಕ ಪೂಜೆಯನ್ನೂ ಆನ್​ಲೈನ್​​ನಲ್ಲೇ ಬುಕ್​ ಮಾಡಬಹುದಾಗಿದೆ.

ಪವಿತ್ರ ನಗರಗಳಾದ ದಿಯೋಘರ್​, ವೃಂದಾವನ್​, ವಾರಣಾಸಿ, ಪ್ರಯಾಗ್​ರಾಜ್​, ಹರಿದ್ವಾರ, ಉಜ್ಜಯಿನಿ, ಹೃಷಿಕೇಶ ಹಾಗೂ ಅಯೋಧ್ಯೆಯ ಬಗ್ಗೆ ಈ ಅಪ್ಲಿಕೇಶನ್​ನಲ್ಲಿ ಮಾಹಿತಿ ಲಭ್ಯವಿದೆ. ಭಗವಾನ್​ ಜಿ ಅಪ್ಲಿಕೇಶನ್​ ದೇಶಾದ್ಯಂತ ಧಾರ್ಮಿಕ ತಾಣಗಳ ಬಗ್ಗೆ ಮಾಹಿತಿ ನೀಡಲಿದ್ದು, ಪೂಜೆ ಸೇರಿದಂತೆ ವಿವಿಧ ದೇವರ ಸೇವೆಗೆ ಆನ್​​ಲೈನ್​ ಹಾಗೂ ಆಫ್​ಲೈನ್​ನಲ್ಲಿ ಬುಕ್ಕಿಂಗ್​ ಮಾಡಲು ಅನುಕೂಲಕಾರಿಯಾಗಿದೆ. ವಿಐಪಿ ಪಾಸ್​, ಪ್ರಸಾದ, ಮಾರ್ಗದರ್ಶಿ ಪ್ರವಾಸ ಹೀಗೆ ಸಾಕಷ್ಟು ಆಯ್ಕೆಗಳು ಈ ಅಪ್ಲಿಕೇಶನ್​ನಲ್ಲಿ ಲಭ್ಯವಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...