alex Certify ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ‘ಮುಖ್ಯ ಮಾಹಿತಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ‘ಮುಖ್ಯ ಮಾಹಿತಿ’

ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ನೌಕರರು ಆರೋಗ್ಯ ಸೇತು ಆಪ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ನೌಕರರು ಕಚೇರಿಗೆ ತೆರಳುವ ಮೊದಲು ಆರೋಗ್ಯ ಸೇತು ಆಪ್ ನಲ್ಲಿ ಆರೋಗ್ಯ ಪರಿಸ್ಥಿತಿಯನ್ನು ಪರೀಕ್ಷಿಸಿಕೊಂಡು ಯಾವುದೇ ಅಪಾಯವಿಲ್ಲವೆಂದು ಖಚಿತವಾದರೆ ಮಾತ್ರ ಕಚೇರಿಗೆ ಬರಬೇಕು ಎಂದು ಸೂಚನೆ ನೀಡಲಾಗಿದೆ.

ನೌಕರರು ಸೋಂಕಿತರೊಂದಿಗೆ ಇತ್ತೀಚೆಗೆ ಸಂಪರ್ಕ ಹೊಂದಿರುವ ಮಾಹಿತಿ ಆರೋಗ್ಯ ಸೇತು ಆಪ್ ನಲ್ಲಿ ಬಂದರೆ ಅಂತಹ ಸರ್ಕಾರಿ ನೌಕರರು ಕಚೇರಿಗೆ ಬರಬಾರದು. 14 ದಿನಗಳ ಕಾಲ ಐಸೋಲೇಷನ್ ನಲ್ಲಿ  ಇರಬೇಕೆಂದು ಸಿಬ್ಬಂದಿ ಸಚಿವಾಲಯ ಸೂಚಿಸಿದೆ. ಕೊರೋನಾ ಸೋಂಕಿನ ಅಪಾಯವನ್ನು ಗುರುತಿಸಲು ಕೇಂದ್ರ ಸರ್ಕಾರ ಆರೋಗ್ಯಸೇತು ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಆಪ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...