alex Certify ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ತಂದೊಡ್ಡಲಿದೆಯೇ ಕೋವಿಡ್ 3ನೇ ಅಲೆ….? ಇಲ್ಲಿದೆ ತಜ್ಞರು ನೀಡಿರುವ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ತಂದೊಡ್ಡಲಿದೆಯೇ ಕೋವಿಡ್ 3ನೇ ಅಲೆ….? ಇಲ್ಲಿದೆ ತಜ್ಞರು ನೀಡಿರುವ ಎಚ್ಚರಿಕೆ

ಕೋವಿಡ್ ಎರಡನೇ ಅಲೆಗೇ ಬೆಚ್ಚಿ ಬಿದ್ದಿರುವ ಜಗತ್ತಿಗೆ ಸಾಂಕ್ರಮಿಕದ ಮೂರನೇ ಅಲೆಯ ಮಾತು ಕೇಳಿದರೇ ನಡುಕ ಹುಟ್ಟುವಂತೆ ಆಗಿಬಿಟ್ಟಿದೆ. ಇದೀಗ ಆ ಭಯವನ್ನು ಇನ್ನಷ್ಟು ಹೆಚ್ಚಿಸುವ ವಾರ್ನಿಂಗ್ ಒಂದನ್ನು ಮಕ್ಕಳ ತಜ್ಞರು ಕೊಟ್ಟಿದ್ದಾರೆ.

ವೈರಸ್‌ನ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳಾಗುವ ಸಾಧ್ಯತೆಗಳಿವೆ ಎಂದು ಮಕ್ಕಳ ತಜ್ಞರು ಅಂದಾಜಿಸಿದ್ದಾರೆ.

ಚೀಸ್​ ಫೋಟೋ ಶೇರ್​ ಮಾಡಿ ಜೈಲುಪಾಲಾದ ಡ್ರಗ್​ ಡೀಲರ್​..!

ಈ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ, ಅವು ಕೋವಿಡ್‌ ವೈರಸ್‌ನ ಆರಂಭಿಕ ಲಕ್ಷಣಗಳಾಗಿರಲಿದ್ದು, ಮನೆಯಲ್ಲೇ ಔಷಧ ಮಾಡಿಕೊಳ್ಳುವ ಬದಲಿಗೆ ಮಕ್ಕಳನ್ನು ಪೆಡಿಯಾಟ್ರಿಷಿಯನ್‌ರ ಹತ್ತಿರ ಕರೆದುಕೊಂಡು ಬರುವ ಅಗತ್ಯವಿದೆ ಎಂದು ಮಕ್ಕಳ ತಜ್ಞರೊಬ್ಬರು ಮೊದಲೇ ಹೇಳಿಬಿಟ್ಟಿದ್ದಾರೆ.

ಆಹಾರ ಅಗಿಯುವ ಶಬ್ದದಿಂದ ಕಿರಿಕಿರಿಯಾಗುತ್ತದೆಯೇ….? ಹಾಗಿದ್ದಲ್ಲಿ ನಿಮಗಿರಬಹುದು ಈ ಸಮಸ್ಯೆ….!

ಕೋವಿಡ್ ಸೋಂಕಿತ ಮನೆಯಲ್ಲಿರುವ ಮಕ್ಕಳಲ್ಲಿ ಸಣ್ಣ ಮಟ್ಟದ ಜ್ವರದೊಂದಿಗೆ ಹೊಟ್ಟೆ ನೋವು, ವಾಂತಿ ಮಾಡಿಕೊಳ್ಳುವುದು, ಬೇಧಿ, ಅಜೀರ್ಣದಂಥ ಲಕ್ಷಣಗಳು ಕಂಡುಬಂದಲ್ಲಿ ಎಚ್ಚರಿಕೆಯಿಂದ ಇರಲು ವೈದ್ಯರು ತಿಳಿಸಿದ್ದಾರೆ.

ಕೋವಿಡ್‌ ಪೀಡಿತ ಮಕ್ಕಳ ಪೈಕಿ 20-30%ರಷ್ಟು ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅನೇಕ ವೈದ್ಯರು ಮೊದಲೇ ಎಚ್ಚರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...