ಕೋವಿಡ್ ಎರಡನೇ ಅಲೆಗೇ ಬೆಚ್ಚಿ ಬಿದ್ದಿರುವ ಜಗತ್ತಿಗೆ ಸಾಂಕ್ರಮಿಕದ ಮೂರನೇ ಅಲೆಯ ಮಾತು ಕೇಳಿದರೇ ನಡುಕ ಹುಟ್ಟುವಂತೆ ಆಗಿಬಿಟ್ಟಿದೆ. ಇದೀಗ ಆ ಭಯವನ್ನು ಇನ್ನಷ್ಟು ಹೆಚ್ಚಿಸುವ ವಾರ್ನಿಂಗ್ ಒಂದನ್ನು ಮಕ್ಕಳ ತಜ್ಞರು ಕೊಟ್ಟಿದ್ದಾರೆ.
ವೈರಸ್‌ನ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳಾಗುವ ಸಾಧ್ಯತೆಗಳಿವೆ ಎಂದು ಮಕ್ಕಳ ತಜ್ಞರು ಅಂದಾಜಿಸಿದ್ದಾರೆ.
ಚೀಸ್ ಫೋಟೋ ಶೇರ್ ಮಾಡಿ ಜೈಲುಪಾಲಾದ ಡ್ರಗ್ ಡೀಲರ್..!
ಈ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ, ಅವು ಕೋವಿಡ್ ವೈರಸ್‌ನ ಆರಂಭಿಕ ಲಕ್ಷಣಗಳಾಗಿರಲಿದ್ದು, ಮನೆಯಲ್ಲೇ ಔಷಧ ಮಾಡಿಕೊಳ್ಳುವ ಬದಲಿಗೆ ಮಕ್ಕಳನ್ನು ಪೆಡಿಯಾಟ್ರಿಷಿಯನ್‌ರ ಹತ್ತಿರ ಕರೆದುಕೊಂಡು ಬರುವ ಅಗತ್ಯವಿದೆ ಎಂದು ಮಕ್ಕಳ ತಜ್ಞರೊಬ್ಬರು ಮೊದಲೇ ಹೇಳಿಬಿಟ್ಟಿದ್ದಾರೆ.
ಆಹಾರ ಅಗಿಯುವ ಶಬ್ದದಿಂದ ಕಿರಿಕಿರಿಯಾಗುತ್ತದೆಯೇ….? ಹಾಗಿದ್ದಲ್ಲಿ ನಿಮಗಿರಬಹುದು ಈ ಸಮಸ್ಯೆ….!
ಕೋವಿಡ್ ಸೋಂಕಿತ ಮನೆಯಲ್ಲಿರುವ ಮಕ್ಕಳಲ್ಲಿ ಸಣ್ಣ ಮಟ್ಟದ ಜ್ವರದೊಂದಿಗೆ ಹೊಟ್ಟೆ ನೋವು, ವಾಂತಿ ಮಾಡಿಕೊಳ್ಳುವುದು, ಬೇಧಿ, ಅಜೀರ್ಣದಂಥ ಲಕ್ಷಣಗಳು ಕಂಡುಬಂದಲ್ಲಿ ಎಚ್ಚರಿಕೆಯಿಂದ ಇರಲು ವೈದ್ಯರು ತಿಳಿಸಿದ್ದಾರೆ.
ಕೋವಿಡ್ ಪೀಡಿತ ಮಕ್ಕಳ ಪೈಕಿ 20-30%ರಷ್ಟು ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆ ಸಂಬಂಧಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಅನೇಕ ವೈದ್ಯರು ಮೊದಲೇ ಎಚ್ಚರಿಸುತ್ತಿದ್ದಾರೆ.