
ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ.
ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ ಬಾಲಸೋರ್ ಜಿಲ್ಲೆಯ ಗ್ರಾಮವೊಂದರ ಜನರಿಗೆ ಇಂಥ ಮತ್ತೊಂದು ಆಮೆ ಕಂಡಿತ್ತು. ಅರಣ್ಯ ಇಲಾಖೆಯ ಸಹಾಯದಿಂದ ಆಮೆಯನ್ನು ಸುರಕ್ಷಿತವಾದ ಜಾಗಕ್ಕೆ ಕಳುಹಿಸಲಾಯಿತು.
ಇದೀಗ ಬುರ್ಧ್ವನ್‌ನ ಕೊಳವೊಂದರಲ್ಲಿ ಕಾಣಸಿಕ್ಕ ಹಳದಿ ಬಣ್ಣದ ಆಮೆಯ ಚಿತ್ರಗಳು ವೈರಲ್ ಆಗಿವೆ. ಈ ಚಿತ್ರವನ್ನು IFS ಅಧಿಕಾರಿ ಶೇರ್ ಮಾಡಿಕೊಂಡಿದ್ದಾರೆ.