alex Certify ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ 21ರಂದು ಬಂದಿಳಿದಿದ್ದಳು. ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಆದರೆ ಈ ಫಲಿತಾಂಶದ ಬಗ್ಗೆ ಮಾಹಿತಿ ಇಲ್ಲದ ಮಹಿಳೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾಳೆ. ಕೂಡಲೇ ಸರ್ಚ್ ಆಪರೇಷನ್​ ನಡೆಸಿದ ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರು ಕೊನೆಗೂ ಮಹಿಳೆಯನ್ನ ಹಿಡಿದಿದ್ದಾರೆ.

ಇದೀಗ ಮಹಿಳೆ ಹಾಗೂ ಆಕೆಯ ಮಗನನ್ನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಮತ್ತೊಮ್ಮೆ ಮಹಿಳೆ ಸ್ಯಾಂಪಲ್​ ಸಂಗ್ರಹಿಸಲಾಗಿದ್ದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...