ದೆಹಲಿ – ವೈಜಾಗ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್ನಿಂದ ಈ ಮಹಿಳೆ ಡಿಸೆಂಬರ್ 21ರಂದು ಬಂದಿಳಿದಿದ್ದಳು. ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಆದರೆ ಈ ಫಲಿತಾಂಶದ ಬಗ್ಗೆ ಮಾಹಿತಿ ಇಲ್ಲದ ಮಹಿಳೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾಳೆ. ಕೂಡಲೇ ಸರ್ಚ್ ಆಪರೇಷನ್ ನಡೆಸಿದ ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತರು ಕೊನೆಗೂ ಮಹಿಳೆಯನ್ನ ಹಿಡಿದಿದ್ದಾರೆ.
ಇದೀಗ ಮಹಿಳೆ ಹಾಗೂ ಆಕೆಯ ಮಗನನ್ನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಮತ್ತೊಮ್ಮೆ ಮಹಿಳೆ ಸ್ಯಾಂಪಲ್ ಸಂಗ್ರಹಿಸಲಾಗಿದ್ದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.