
ಈ ರೀತಿ ಪ್ಲಾನ್ ಮಾಡುವವರಿಗೆ ಆನಂದ್ ಮಹೀಂದ್ರಾರ ಈ ಪೋಸ್ಟ್ ಒಳ್ಳೆಯ ಸ್ಥಳದ ಸಲಹೆ ನೀಡಬಲ್ಲುದು.
ಗಣಿತದ ಒಂದು ಲೆಕ್ಕಾಚಾರವನ್ನ ಹೊಂದಿರುವ ಈ ಫೋಟೋ ನಿಮಗೆ ಒಳ್ಳೆಯ ಪ್ರವಾಸಿ ತಾಣವನ್ನ ತೋರಿಸಲಿದೆ ಅಂತಾ ಆನಂದ್ ಮಹೀಂದ್ರಾ ಹೇಳಿದ್ದಾರೆ.
ಒಂದರಿಂದ 15ರವರೆಗೆ ನಿಮಗೆ ಒಂದೊಂದು ಸ್ಥಳದ ಹೆಸರನ್ನ ಇಡಲಾಗಿದೆ. 1 ರಿಂದ 9ರೊಳಗಗಿನ ಯಾವುದೇ ಒಂದು ಸಂಖ್ಯೆಯನ್ನ ಆಯ್ಕೆ ಮಾಡಿಕೊಳ್ಳಿ. ನೀವು ಆಯ್ಕೆ ಮಾಡಿಕೊಂಡ ಸಂಖ್ಯೆಯನ್ನ ಮೂರರಿಂದ ಗುಣಾಕಾರ ಮಾಡಿ. ಬಂದ ಉತ್ತರಕ್ಕೆ ಮೂರನ್ನ ಸಂಕಲನ ಮಾಡಿ. ಈಗ ನಿಮಗೆ ಸಿಕ್ಕ ಎರಡು ಸಂಖ್ಯೆಯ ಆ ನಂಬರ್ನ್ನ ಕೂಡಿಸಿ. ಬರುವ ಉತ್ತರವೇ ನೀವು ಯಾವ ಸ್ಥಳಕ್ಕೆ ಹೋಗಬೇಕು ಎಂಬ ಸಲಹೆ ನೀಡಲಿದೆ.
ಅಂದಹಾಗೆ ನಿಮಗೆ ಸಿಕ್ಕ ಸ್ಥಳ ಯಾವುದು..?