ದೇಶದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು ದಿನೇ ದಿನೇ ಆತಂಕ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಹದಗೆಡುತ್ತಿದ್ದರೂ ಸಹ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಮನವಿಗಳಿಗೆ ಬಹಳಷ್ಟು ಜನರು ಕಿವಿಗೊಡುತ್ತಿಲ್ಲ.
ಪರಿಸ್ಥಿತಿಯನ್ನು ವಿವರಿಸುವ ಚಿತ್ರವೊಂದನ್ನು ಶೇರ್ ಮಾಡಿರುವ ಉದ್ಯಮಿ ಆನಂದ್ ಮಹಿಂದ್ರಾ, ಸೋಂಕಿನ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ ಎಂದಿದ್ದಾರೆ. ಬ್ಯಾಂಕಿಗೆ ಭೇಟಿ ಕೊಟ್ಟಿರುವ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡಲು ಇದ್ದ ಗಾಜಿನ ಗೋಡೆ ಮೂಲಕ ತಲೆ ತೂರಿಸಿರುವುದನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಮಾಡಬೇಡಿ ಈ ಕೆಲಸ
“ನಾವು ಸಾಮಾಜಿಕ ಅಂತರಕ್ಕೆ ಒಗ್ಗಿಕೊಂಡಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ನಾವು ನಮ್ಮ ಕೈಲಾದಷ್ಟನ್ನು ಮಾಡುವ ಸಮಯ ಬಂದಿದೆ: ನಾವೆಲ್ಲಾ ಮಾಸ್ಕ್ ಹಾಕಿಕೊಳ್ಳಬೇಕಿದೆ,” ಎಂದಿದ್ದಾರೆ ಮಹಿಂದ್ರಾ. ಚಿತ್ರವು ಬಹಳ ಫನ್ನಿಯಾಗಿದ್ದರೂ ಸಹ ನಮ್ಮ ಸುತ್ತಲಿನ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಕಣ್ಣಿಗೆ ಕಟ್ಟಿಕೊಡುವಂತಿದೆ.