alex Certify ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್‌ ಮಾಡಿದ ಆನಂದ್​ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್‌ ಮಾಡಿದ ಆನಂದ್​ ಮಹೀಂದ್ರಾ

ಕೊರೊನಾ ಎರಡನೇ ಅಲೆಯ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಕೋಕೋ ಕೊಲಾದ ವೈರಲ್​ ಜಾಹೀರಾತನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಈ ಮೂಲಕ ಜನರಲ್ಲಿ ಭರವಸೆ ಹಾಗೂ ಸಕಾರಾತ್ಮಕ ಭಾವ ಮೂಡಿಸಲು ಯತ್ನಿಸಿದ್ದಾರೆ. ಈ ಜಾಹೀರಾತನ್ನ ಕಳೆದ ವರ್ಷ ಕೊಕೊ ಕೋಲಾ ಪ್ರಕಟಿಸಿತ್ತು.

ಇದೀಗ ದೇಶದಲ್ಲಿ ಮತ್ತೊಮ್ಮೆ ಕೊರೊನಾದ ಆರ್ಭಟ ಜೋರಾಗಿರುವ ಹಿನ್ನೆಲೆ ಆನಂದ್​ ಮಹೀಂದ್ರಾ ಈ ಜಾಹೀರಾತನ್ನ ಮತ್ತೊಮ್ಮೆ ಜ್ಞಾಪಿಸಿದ್ದಾರೆ. ಈ ವಿಡಿಯೋದಲ್ಲಿ ಕೊರೊನಾ ಸಂದರ್ಭದಲ್ಲಿ ಶಿಕ್ಷಕರು, ಡೆಲಿವರಿ ಬಾಯ್ಸ್, ಆರೋಗ್ಯ ಸಿಬ್ಬಂದಿ, ಜನರು ಇವರ ಜೀವನವೆಲ್ಲ ಹೇಗೆ ಬದಲಾಗಿದೆ ಎಂಬುದನ್ನ ತೋರಿಸಲಾಗಿದೆ.

ಈ ವಿಡಿಯೋವನ್ನ ಶೇರ್​ ಮಾಡಿರುವ ಆನಂದ್​ ಮಹೀಂದ್ರಾ, ಆಶಾವಾದ – ನಾವೆಲ್ಲರೂ ಸೇರಬೇಕಾಗಿರೋದು ಇದೇ ಸಾರ್ವತ್ರಿಕ ಧರ್ಮಕ್ಕೆ. ಧನ್ಯವಾದ ಕೊಕೊ ಕೋಲಾ ಎಂದು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

— anand mahindra (@anandmahindra) April 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...