ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ 30-04-2021 11:12AM IST / No Comments / Posted In: Latest News, India ಕೊರೊನಾ ಎರಡನೇ ಅಲೆಯ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೋಕೋ ಕೊಲಾದ ವೈರಲ್ ಜಾಹೀರಾತನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಜನರಲ್ಲಿ ಭರವಸೆ ಹಾಗೂ ಸಕಾರಾತ್ಮಕ ಭಾವ ಮೂಡಿಸಲು ಯತ್ನಿಸಿದ್ದಾರೆ. ಈ ಜಾಹೀರಾತನ್ನ ಕಳೆದ ವರ್ಷ ಕೊಕೊ ಕೋಲಾ ಪ್ರಕಟಿಸಿತ್ತು. ಇದೀಗ ದೇಶದಲ್ಲಿ ಮತ್ತೊಮ್ಮೆ ಕೊರೊನಾದ ಆರ್ಭಟ ಜೋರಾಗಿರುವ ಹಿನ್ನೆಲೆ ಆನಂದ್ ಮಹೀಂದ್ರಾ ಈ ಜಾಹೀರಾತನ್ನ ಮತ್ತೊಮ್ಮೆ ಜ್ಞಾಪಿಸಿದ್ದಾರೆ. ಈ ವಿಡಿಯೋದಲ್ಲಿ ಕೊರೊನಾ ಸಂದರ್ಭದಲ್ಲಿ ಶಿಕ್ಷಕರು, ಡೆಲಿವರಿ ಬಾಯ್ಸ್, ಆರೋಗ್ಯ ಸಿಬ್ಬಂದಿ, ಜನರು ಇವರ ಜೀವನವೆಲ್ಲ ಹೇಗೆ ಬದಲಾಗಿದೆ ಎಂಬುದನ್ನ ತೋರಿಸಲಾಗಿದೆ. ಈ ವಿಡಿಯೋವನ್ನ ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಆಶಾವಾದ – ನಾವೆಲ್ಲರೂ ಸೇರಬೇಕಾಗಿರೋದು ಇದೇ ಸಾರ್ವತ್ರಿಕ ಧರ್ಮಕ್ಕೆ. ಧನ್ಯವಾದ ಕೊಕೊ ಕೋಲಾ ಎಂದು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. https://twitter.com/i/status/1387626426464018432 Nice positive video 😊👍 Need of the present moment to remain resolutely positive and help others 🙏 — Dr Charuhas (Modi ji's Family) (@charuhasmujumd1) April 29, 2021 Thank you for sharing the optimism. Together, we can make a difference. #StopTheSpread — Coca-Cola India (@CocaCola_Ind) April 29, 2021 “As long as there are human beings capable of empathy and hope, the world will get better.” — Dharma (@dharmasuja) April 29, 2021 Thanks for sharing sir… — Ashish Chaudhary (@twt_ashish) April 29, 2021