ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ.
ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! ತನ್ನ ಆರ್ಕೈವ್ಸ್‌ನಿಂದ ಈ ಚಿತ್ರವನ್ನು ಶೇರ್ ಮಾಡಿಕೊಂಡ ನನ್ನ ಸ್ನೇಹಿತೆಯೊಬ್ಬರಿಗೆ ಧನ್ಯವಾದ; 2001ರಲ್ಲಿ ಸ್ಟೀಫನ್ ಹಾಕಿಂಗ್ ಮುಂಬಯಿಗೆ ಭೇಟಿ ಕೊಟ್ಟ ಕ್ಷಣ. ವಿಶೇಷವಾಗಿ ತಯಾರಿಸಲಾದ ಮಿನಿ ವ್ಯಾನ್ ಒಂದನ್ನು ಅವರಿಗಾಗಿ ಸಿದ್ಧಪಡಿಸಿದ ನನ್ನ ಆಟೋ ತಂಡದ ಬಗ್ಗೆ ಹೆಮ್ಮೆ ಇದೆ, ಇದರಿಂದಾಗಿ ಅವರು ನಗರದಲ್ಲಿ ಆರಾಮವಾಗಿ ಓಡಾಡುವ ವ್ಯವಸ್ಥೆ ಆಗಿತ್ತು” ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸೇವೆ ನೀಡಲಿದೆ ಉಬರ್
2001ರೆಲ್ಲಿ ಭಾರತಕ್ಕೆ ಆಗಮಿಸಿದ್ದ ವೇಳೆ ಹಾಕಿಂಗ್‌ಗೆ ತಮ್ಮನ್ನು ಗಾಲಿಕುರ್ಚಿ ಮೇಲೆ ಕೂರಿಸಿಕೊಂಡು ಓಡಾಡುವಂತೆ ಅನುಕೂಲ ಮಾಡಿಕೊಡಲು ವಿಶೇಷ ವಾಹನವೊಂದು ಬೇಕಿತ್ತು.
ಮುಂಬೈಯಲ್ಲಿರುವ ಟಾಟಾ ಸಂಶೋಧನಾ ಸಂಸ್ಥೆಯ ಪ್ರತಿಷ್ಠಿತ ಸರೋಜಿನಿ ದಾಮೋದರನ್ ಫೆಲೋಶಿಪ್ ಗೌರವ ಸ್ವೀಕರಿಸಲು ಹಾಕಿಂಗ್ ಭಾರತಕ್ಕೆ ಬಂದಿದ್ದರು.