alex Certify ಖುಷಿ ಎಲ್ಲಿ ಸಿಗುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಸಿಂಪಲ್‌ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಎಲ್ಲಿ ಸಿಗುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಸಿಂಪಲ್‌ ಉತ್ತರ

ಖುಷಿ ಎಲ್ಲಿ ಸಿಗುತ್ತೆ ಅಂತಾ ನಿಮ್ಮನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಇದಕ್ಕೆ ಉತ್ತರ ಕೊಡೋದು ತುಂಬಾನೇ ಕಷ್ಟ, ಆದ್ರೆ ಮಹೀಂದ್ರಾ & ಮಹೀಂದ್ರಾ ಮಾಲೀಕ ಆನಂದ್​ ಮಹೀಂದ್ರಾ ತಮ್ಮ ಟ್ವಿಟರ್​​ ಪೋಸ್ಟ್​ನಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇಬ್ಬರು ಪಾತ್ರಧಾರಿಗಳಿರುವ ಈ ಡ್ರಾಯಿಂಗ್​​ನಲ್ಲಿ ಅವರಿಬ್ಬರು ಖುಷಿ ಎಲ್ಲಿ ಸಿಗುತ್ತೆ ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ. ಇದರಲ್ಲಿ ಒಂದು ಪಾತ್ರಧಾರಿ ನಿನಗೆ ಖುಷಿ ಎಲ್ಲಿ ಸಿಕ್ಕಿತು? ಇದಕ್ಕಾಗಿ ನಾನು ಎಲ್ಲ ಕಡೆ ಹುಡುಕ್ತಾ ಇದ್ದೆ ಎಂದು ಹೇಳುತ್ತೆ. ಇದಕ್ಕೆ ಇನ್ನೊಂದು ಪಾತ್ರದಲ್ಲಿ ಖುಷಿಯನ್ನ ನಾನು ನನಗಾಗಿ ಸೃಷ್ಟಿಸಿಕೊಂಡೆ ಎಂದು ಉತ್ತರ ನೀಡುತ್ತೆ.

ಈ ಫೋಟೋವನ್ನ ಪೋಸ್ಟ್ ಮಾಡಿರುವ ಆನಂದ್​ ಮಹೀಂದ್ರಾ, ಕೆಲವೊಮ್ಮೆ ಸರಳವಾದ ಡ್ರಾಯಿಂಗ್​​ಗಳು ನೂರು ಚಿತ್ರಗಳಿಗೆ ಸಮನಾಗಿ ತೂಗುತ್ತವೆ ಎಂದು ಬರೆದುಕೊಂಡಿದ್ದಾರೆ. ಆನಂದ್​ರ ಈ ಟ್ವೀಟ್​ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿವೆ.

— anand mahindra (@anandmahindra) November 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...