
ಇಬ್ಬರು ಪಾತ್ರಧಾರಿಗಳಿರುವ ಈ ಡ್ರಾಯಿಂಗ್ನಲ್ಲಿ ಅವರಿಬ್ಬರು ಖುಷಿ ಎಲ್ಲಿ ಸಿಗುತ್ತೆ ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ. ಇದರಲ್ಲಿ ಒಂದು ಪಾತ್ರಧಾರಿ ನಿನಗೆ ಖುಷಿ ಎಲ್ಲಿ ಸಿಕ್ಕಿತು? ಇದಕ್ಕಾಗಿ ನಾನು ಎಲ್ಲ ಕಡೆ ಹುಡುಕ್ತಾ ಇದ್ದೆ ಎಂದು ಹೇಳುತ್ತೆ. ಇದಕ್ಕೆ ಇನ್ನೊಂದು ಪಾತ್ರದಲ್ಲಿ ಖುಷಿಯನ್ನ ನಾನು ನನಗಾಗಿ ಸೃಷ್ಟಿಸಿಕೊಂಡೆ ಎಂದು ಉತ್ತರ ನೀಡುತ್ತೆ.
ಈ ಫೋಟೋವನ್ನ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, ಕೆಲವೊಮ್ಮೆ ಸರಳವಾದ ಡ್ರಾಯಿಂಗ್ಗಳು ನೂರು ಚಿತ್ರಗಳಿಗೆ ಸಮನಾಗಿ ತೂಗುತ್ತವೆ ಎಂದು ಬರೆದುಕೊಂಡಿದ್ದಾರೆ. ಆನಂದ್ರ ಈ ಟ್ವೀಟ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿವೆ.