alex Certify ಆನಂದ್ ಮಹೀಂದ್ರಾ ಶೇರ್‌ ಮಾಡಿದ ಚಿತ್ರಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನಂದ್ ಮಹೀಂದ್ರಾ ಶೇರ್‌ ಮಾಡಿದ ಚಿತ್ರಕ್ಕೆ ನೆಟ್ಟಿಗರು ಫಿದಾ

 

ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಒಂದು ಚಿತ್ರವನ್ನ ಹಂಚಿಕೊಂಡಿದ್ದು ಇದನ್ನ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋಗೆ ಆನಂದ್​ ಮಹೀಂದ್ರಾ ಇದು ಕಲೆಯ ಶಕ್ತಿ ಎಂಬ ಶೀರ್ಷಿಕೆಯನ್ನ ನೀಡಿದ್ದಾರೆ.

ಬರ್ನಿಂಗ್​ ಮ್ಯಾನ್​ ಸಮುದಾಯ, ಕಲೆ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯನ್ನ ಕೇಂದ್ರೀಕರಿಸುವ ಹಬ್ಬವಾಗಿದ್ದು ಇದನ್ನ ಪಶ್ಚಿಮ ಅಮೆರಿಕದ ಭಾಗದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತೆ. ಈ ಚಿತ್ರ ಕೂಡ ಬರ್ನಿಂಗ್​ ಮ್ಯಾನ್​ನ ಹೆಸರಾಂತ ಚಿತ್ರಕಲೆಯಾಗಿದೆ.

ಈ ಚಿತ್ರದಲ್ಲಿ ಮನುಷ್ಯರಿಬ್ಬರು ಒಬ್ಬರಿಗೊಬ್ಬರು ಬೆನ್ನು ಮಾಡಿ ಬೇಸರದಲ್ಲಿ ಕೂತಿದ್ದಾರೆ. ಅವರೊಳಗಿನ ಮಗುವಿನ ಮನಸ್ಸು ಒಬ್ಬರಿಗೊಬ್ಬರ ಜೊತೆ ನಂಟು ಬೆಸೆದ ರೀತಿಯಲ್ಲಿ ಚಿತ್ರಿಸಲಾಗಿದೆ. ಆನಂದ್​ ಮಹೀಂದ್ರಾ ಶೇರ್​ ಮಾಡಿರುವ ಈ ಚಿತ್ರಕಲೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಮಕ್ಕಳಿಂದ ದೊಡ್ಡವರು ಪಾಠ ಕಲಿಯಬೇಕಾದ್ದು ತುಂಬಾನೆ ಇದೆ ಅಂತಾ ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ನೈಜ ಹಾಗೂ ಸ್ಪೂರ್ತಿದಾಯಕ ಎಂದು ಬರೆದುಕೊಂಡಿದ್ದಾರೆ.

— anand mahindra (@anandmahindra) February 25, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...