alex Certify ಅಮುಲ್​ನಿಂದಲೂ ರಾಹುಲ್ ದ್ರಾವಿಡ್​ರ ʼಇಂದಿರಾ ನಗರ್​ ಕಿ ಗೂಂಡಾʼ ಜಾಹೀರಾತು ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮುಲ್​ನಿಂದಲೂ ರಾಹುಲ್ ದ್ರಾವಿಡ್​ರ ʼಇಂದಿರಾ ನಗರ್​ ಕಿ ಗೂಂಡಾʼ ಜಾಹೀರಾತು ಬಳಕೆ

ಜಾಹಿರಾತೊಂದರಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳೋದ್ರ ಮೂಲಕ ರಾಹುಲ್​ ದ್ರಾವಿಡ್​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಕ್ರಿಯೇಟ್​ ಮಾಡಿದ್ದಾರೆ.

ರಾಹುಲ್​ ದ್ರಾವಿಡ್​​ ರ ʼಇಂದಿರಾ ನಗರ್​ ಕಾ ಗೂಂಡಾ ಹೂ ಮೇʼ ಡೈಲಾಗ್​ ಅಂತೂ ಎಷ್ಟರ ಮಟ್ಟಿಗೆ ಫೇಮಸ್​ ಆಗಿದೆ ಅಂದರೆ ಪೊಲೀಸ್​ ಇಲಾಖೆಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲೂ ಶೇರ್​ ಮಾಡಲಾಗ್ತಿದೆ.

ಸದಾ ಶಾಂತ ಸ್ವಭಾವದಲ್ಲೇ ಇರುವ ರಾಹುಲ್​ ದ್ರಾವಿಡ್​ ಈ ಜಾಹಿರಾತಿನಲ್ಲಿ ತಮ್ಮ ಉಗ್ರ ರೂಪವನ್ನ ಪ್ರದರ್ಶಿಸಿದ್ದು, ಇದನ್ನ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಬೆಂಗಳೂರಿನ ಟ್ರಾಫಿಕ್​​​ ಬಗ್ಗೆ ರಾಹುಲ್​ ದ್ರಾವಿಡ್​ ಆಕ್ರೋಶ ಹೊರಹಾಕುತ್ತಿರುವ ದೃಶ್ಯ ಇದಾಗಿದೆ.

ಇದೀಗ ಪ್ರತಿಷ್ಟಿತ ಡೈರಿ ವಸ್ತುಗಳ ಉತ್ಪಾದಕ ಸಂಸ್ಥೆ ಅಮುಲ್​ ಕೂಡ ರಾಹುಲ್​ ದ್ರಾವಿಡ್​​ರ ಮೀಮ್ಸ್ ಒಂದನ್ನ ಹರಿಬಿಟ್ಟಿದೆ. ಜ್ಯಾಮಿ ರಾಗ್​​ ಮಾಡ್ತಾರೆ, ಬೆಣ್ಣೆ ಶಾಂತ ಮಾಡುತ್ತೆ ಎಂದು ಈ ಫೋಟೋವನ್ನ ಶೇರ್​ ಮಾಡಲಾಗಿದೆ. ಈ ಕಾರ್ಟೂನ್​ ಕೂಡ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

— Amul.coop (@Amul_Coop) April 12, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...