![](https://kannadadunia.com/wp-content/uploads/2021/04/568094.jpg)
ರಾಹುಲ್ ದ್ರಾವಿಡ್ ರ ʼಇಂದಿರಾ ನಗರ್ ಕಾ ಗೂಂಡಾ ಹೂ ಮೇʼ ಡೈಲಾಗ್ ಅಂತೂ ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದರೆ ಪೊಲೀಸ್ ಇಲಾಖೆಗಳ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಶೇರ್ ಮಾಡಲಾಗ್ತಿದೆ.
ಸದಾ ಶಾಂತ ಸ್ವಭಾವದಲ್ಲೇ ಇರುವ ರಾಹುಲ್ ದ್ರಾವಿಡ್ ಈ ಜಾಹಿರಾತಿನಲ್ಲಿ ತಮ್ಮ ಉಗ್ರ ರೂಪವನ್ನ ಪ್ರದರ್ಶಿಸಿದ್ದು, ಇದನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ರಾಹುಲ್ ದ್ರಾವಿಡ್ ಆಕ್ರೋಶ ಹೊರಹಾಕುತ್ತಿರುವ ದೃಶ್ಯ ಇದಾಗಿದೆ.
ಇದೀಗ ಪ್ರತಿಷ್ಟಿತ ಡೈರಿ ವಸ್ತುಗಳ ಉತ್ಪಾದಕ ಸಂಸ್ಥೆ ಅಮುಲ್ ಕೂಡ ರಾಹುಲ್ ದ್ರಾವಿಡ್ರ ಮೀಮ್ಸ್ ಒಂದನ್ನ ಹರಿಬಿಟ್ಟಿದೆ. ಜ್ಯಾಮಿ ರಾಗ್ ಮಾಡ್ತಾರೆ, ಬೆಣ್ಣೆ ಶಾಂತ ಮಾಡುತ್ತೆ ಎಂದು ಈ ಫೋಟೋವನ್ನ ಶೇರ್ ಮಾಡಲಾಗಿದೆ. ಈ ಕಾರ್ಟೂನ್ ಕೂಡ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.