ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಮೂರು ನಗರಗಳು ಯಾವುದೇ ಕ್ಷಣದಲ್ಲಿ ಕಠಿಣ ಲಾಕ್ಡೌನ್ ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ.
ಯವತ್ಮಾಲ್, ಅಮರಾವತಿ ಹಾಗೂ ಅಕೊಲಾ ನಗರಗಳು ಈ ಲಿಸ್ಟ್ಗೆ ಸೇರಿವೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಅಜಿತ್ ಪವಾರ್ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಮತ್ತು ಶೀಘ್ರದಲ್ಲೇ ಈ ಸಂಬಂಧ ಸೂಕ್ತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ಕೋವಿಡ್ 19 ಪರಿಸ್ಥಿತಿ ಕುರಿತು ಅಮರಾವತಿ, ಯವತ್ಮಾಲ್ ಹಾಗೂ ಅಕೋಲಾದ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪವಾರ್ ಮಾಹಿತಿ ನೀಡಿದ್ದಾರೆ. ಇದರ ಮಧ್ಯೆ ಅಮರಾವತಿಯಲ್ಲಿ ಸೀಮಿತ ಲಾಕ್ ಡೌನ್ ಘೋಷಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.