ವಿಶ್ಯಾದ್ಯಂತ ಡೆಡ್ಲಿ ವೈರಸ್ ಹಾವಳಿ ಶುರುವಾಗಿ ವರ್ಷಗಳೇ ಕಳೆದಿದೆ. ರೂಪಾಂತರಿ ವೈರಸ್ಗಳು ಜನರನ್ನ ಹೈರಾಣಾಗಿಸಿವೆ. ಈಗಾಗಲೇ ವಿವಿಧ ದೇಶಗಳ ಸರ್ಕಾರಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೊರೊನಾ ಲಸಿಕೆ ಅಭಿಯಾನಗಳನ್ನ ನಡೆಸುತ್ತಿವೆ.
ಆದರೆ ನಮ್ಮ ಸಮೀಪದಲ್ಲಿ ಇರುವ ಲಸಿಕೆ ಕೇಂದ್ರ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಿದ್ದಿರಬಹುದು. ನಿಮ್ಮ ಈ ಗೊಂದಲಕ್ಕೆ ಉತ್ತರ ನೀಡಲು ಅಮೆಜಾನ್ ಅಲೆಕ್ಸಾ ಸಜ್ಜಾಗಿದೆ.
ಅಮೆಜಾನ್ ಅಲೆಕ್ಸಾ ಮೂಲಕ ನೀವು ಇನ್ಮುಂದೆ ನಿಮ್ಮ ಹತ್ತಿರದ ಕೊರೊನಾ ಲಸಿಕಾ ಕೇಂದ್ರಗಳು ಎಲ್ಲಿವೆ ಅನ್ನೋದನ್ನ ಪತ್ತೆ ಮಾಡಬಹುದಾಗಿದೆ.
ಅಮೆರಿಕದಲ್ಲಿರುವ ಅಮೆಜಾನ್ ಅಲೆಕ್ಸಾ ಬಳಕೆದಾರರಿಗಾಗಿ Alexa, where can I get a COVID vaccine? (ಅಲೆಕ್ಸಾ, ನಾನು ಎಲ್ಲಿ ಕೋವಿಡ್ ಲಸಿಕೆ ಪಡೆಯಬಹದು..?) ಎಂಬ ಆಯ್ಕೆಯನ್ನ ನೀಡಲಾಗಿದೆ. ಈ ಸೌಲಭ್ಯವನ್ನ ಭಾರತದಲ್ಲೂ ನೀಡುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.
ಅಲೆಕ್ಸಾ ಸರಿ ಸುಮಾರು 85 ದೇಶಗಳಲ್ಲಿರುವ ಕೊರೊನಾ ಲಸಿಕೆಯ ಅರ್ಹತೆ ಬಗ್ಗೆ ಹಾಗೂ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಿದೆ. ಗ್ರಾಹಕರು ಕೇಳಿರುವ ಕೊರೊನಾ ಸಂಬಂಧಿ ಮಿಲಿಯನ್ಗಟ್ಟಲೇ ಪ್ರಶ್ನೆಗಳಿಗೆ ಅಲೆಕ್ಸಾ ಸರಿಯಾದ ಉತ್ತರ ನೀಡಿದೆ ಎಂದು ಅಮೆಜಾನ್ ಹೇಳಿದೆ.