alex Certify ಬಾಂಬ್ ದಾಳಿಯಲ್ಲೂ ಬದುಕುಳಿದಿದ್ದ ಮೊಸಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಬ್ ದಾಳಿಯಲ್ಲೂ ಬದುಕುಳಿದಿದ್ದ ಮೊಸಳೆ ಸಾವು

ಎರಡನೇ ಮಹಾಯುದ್ಧ ಮತ್ತು 1945 ರಲ್ಲಿ ಬರ್ಲಿನ್ ಕದನದಲ್ಲಿ ಬಾಂಬ್ ಸ್ಫೋಟದ ನಡುವೆಯೂ ಬದುಕುಳಿದ 84 ವರ್ಷದ ಮೊಸಳೆಯೊಂದು ಮಾಸ್ಕೋದ ಮೃಗಾಲಯದಲ್ಲಿ ವಯೋಸಹಜ ಕಾರಣದಿಂದ ಇದೀಗ ಮೃತಪಟ್ಟಿದೆ.

ಸಾಮಾನ್ಯವಾಗಿ ಮೊಸಳೆಗಳು ಕಾಡಿನಲ್ಲಿ 30ರಿಂದ 50 ವರ್ಷಗಳ ಅಂತರದಲ್ಲಿ ಜೀವಿಸುತ್ತವೆ.‌ ಮೃಗಾಲಯದಲ್ಲಿರುವ ಮೊಸಳೆಗಳ ಜೀವಿತಾವಧಿ 70 ರಿಂದ 80 ವರ್ಷಗಳವರೆಗೆ ಇರುತ್ತದೆ.

ಈ ಮೊಸಳೆ ಅಡಾಲ್ಫ್ ಹಿಟ್ಲರ್ ಗೆ ಸೇರಿದ್ದು ಎಂಬ ವದಂತಿಗಳು ಇವೆ. ಆದರೆ 1936ರಲ್ಲಿ ಇದನ್ನು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಲಾಗಿತ್ತು ಎಂಬ ಮಾಹಿತಿ ಇದೆ.‌ 1943ರಲ್ಲಿ ಮೃಗಾಲಯದ ಮೇಲೆ ನಡೆದ ಬಾಂಬ್ ಸ್ಫೋಟದಲ್ಲಿ ಈ ಮೊಸಳೆ ಬದುಕುಳಿದಿತ್ತು.

ಯುದ್ಧ ಮುಗಿದ ಬಳಿಕ ಶರ್ಟನ್ ಹೆಸರಿನ ಮೊಸಳೆಯನ್ನು ಬ್ರಿಟಿಷ್ ಸೈನಿಕರು ಸೋವಿಯತ್ ಒಕ್ಕೂಟಕ್ಕೆ ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದಲೂ ಮಾಸ್ಕೋ ಮೃಗಾಲಯದಲ್ಲಿ ರಕ್ಷಣೆ ಪಡೆದಿತ್ತು

ಮೊಸಳೆಯ ನಿಧನದ ಸುದ್ದಿಯನ್ನು ಮೃಗಾಲಯ ಖಚಿತಪಡಿಸಿದ್ದು, ಈವರೆಗೂ ಅದು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ಸಂದರ್ಶಕರು ಮತ್ತು ಮೃಗಾಲಯ ಸಂರಕ್ಷಕರು ಬಹಳ ಪ್ರೀತಿಯಿಂದ ಅದನ್ನು ನೋಡುತ್ತಿದ್ದರು ಎಂದು ಸಂದೇಶ ಪ್ರಕಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...